ಕಾಂತಾರ ಸಿನಿಮಾ ರೀತಿಯಲ್ಲಿ 'ಪಂಜುರ್ಲಿ' ದೈವದ ವೇಷ ತೊಟ್ಟು ದೈವಕ್ಕೆ ಅಣಕ ಯುವತಿಯಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ

ಕಾಂತಾರ ಸಿನಿಮಾ ರೀತಿಯಲ್ಲಿ 'ಪಂಜುರ್ಲಿ' ದೈವದ ವೇಷ ತೊಟ್ಟು ದೈವಕ್ಕೆ ಅಣಕ ಯುವತಿಯಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ

ಬೆಳ್ತಂಗಡಿ: ಕಾಂತಾರ ಸಿನಿಮಾ ರೀತಿಯಲ್ಲಿ 'ಪಂಜುರ್ಲಿ' ದೈವದ ವೇಷ ತೊಟ್ಟು ದೈವಕ್ಕೆ ಅಪಮಾನ ಮಾಡಿದ್ದ ಯುವತಿ ಜಾಲತಾಣದಲ್ಲಿ ತುಳುನಾಡಿನ ಜನರ ಆಕ್ರೋಶಕ್ಕೆ ಮಣಿದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ್ದಾಳೆ.

ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಎಂಬಾಕೆ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಳು. ಈ ಬಗ್ಗೆ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತನ್ನ ಪೋಸ್ಟ್ ಡಿಲೀಟ್ ಮಾಡಿದ್ದಳು. ಇದೀಗ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಕ್ಷಮೆ ಯಾಚಿಸಿದ್ದು ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ. ಶ್ವೇತಾ ರೆಡ್ಡಿ ತಪ್ಪು ಕಾಣಿಕೆ ಹಾಕಿದ ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿಯಾಗಿ ಕ್ಷಮೆ  ಯಾಚನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹರಿ ಬಿಟ್ಟಿದ್ದ ಶ್ವೇತಾ ರೆಡ್ಡಿ, ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ಕುಣಿಯುವುದನ್ನು ತೋರಿಸಿದ್ದಳು. ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ರೀಲ್ಸ್ ಮಾಡಿದ್ದ ಈಕೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಹಲವರು ಶ್ವೇತಾ ರೆಡ್ಡಿ ವಿರುದ್ಧ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಅಂತ ಶಾಪ ಹಾಕಿದ್ದರು. ಇದರಿಂದ ಭೀತಿಗೊಂಡಿದ್ದ ಶ್ವೇತಾ ತನ್ನ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದಳು. ದಯವಿಟ್ಟು ಹರಕೆ ಇಡಬೇಡಿ, ಕ್ಷಮೆ ಕೋರುತ್ತೇನೆ ಎಂದಿದ್ದರು.

Ads on article

Advertise in articles 1

advertising articles 2

Advertise under the article