ಬಂಟ್ವಾಳ: ನ. 6ರಂದು ನಿರತ ಸಾಹಿತ್ಯ ಸಂಪದದ ಬೆಳ್ಳಿಹಬ್ಬ
Thursday, November 3, 2022
ಬಂಟ್ವಾಳ: ನಿರತ ಸಾಹಿತ್ಯ ಸಂಪದ ಕಡೆಗೋಳಿ, ತುಂಬೆ ಇದರ ಬೆಳ್ಳಿಹಬ್ಬ ನ. 6ರಂದು ಬಿಸಿ ರೋಡ್‌ನ ಕೈಕುಂಜೆಯ ಕನ್ನಡ ಭವನದಲ್ಲಿ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ನಡೆಯಲಿರುವ ಬೆಳ್ಳಿ ಹೆಜ್ಜೆ ಕಾರ್ಯಕ್ರಮಕ್ಕೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಚಾಲನೆ ನೀಡಲಿದ್ದಾರೆ. ನಿರತ ಸಾಹಿತ್ಯ ಸಂಪದದ ಗೌರವಾಧ್ಯಕ್ಷ ವಿ ಸುಬ್ರಹ್ಮಣ್ಯ ಭಟ್ ಆಧ್ಯಕ್ಷತೆ ವಹಿಸಲಿದ್ದಾರೆ.
ಜಗನ್ನಾಥ ಚೌಟ ಬದಿಗುಡ್ಡೆ, ಕೆ.ಎನ್ ಗಂಗಾಧರ ಆಳ್ವ, ಬಿ. ಮುಹಮ್ಮದ್ ತುಂಬೆ, ಪ್ರವೀಣ್ ಬಿ ತುಂಬೆ ಮತ್ತಿತರು ಭಾಗವಹಿಸಲಿದ್ದಾರೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಾಹಿತಿ ಚಂದ್ರಕಲಾ ನಂದಾವರ ಅವರಿಗೆ ನಿರತ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ವೇಳೆ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆಯಲ್ಲಿ 25 ಕವಿಗಳಿಂದ ಕವಿಗೋಷ್ಟಿ ನಡೆಯಲಿದ್ದು, ಸುಬ್ರಾಯ ಭಟ್, ಅನಿಲ್ ಪಂಡಿತ್ ಉಪಸ್ಥಿತರಿರುವರು.
ದಿನೇಶ್ ಶೆಟ್ಟಿ ಅಳಿಕೆ, ದೇವದಾಸ್ ಅರ್ಕುಳ, ಜಯರಾಮ ಪಡ್ರೆ ಮತ್ತು ಬಳಗದವರಿಂದ ಜಾಂಬವತಿ ಪರಿಣಯ ಪ್ರಸಂಗದ ಯಕ್ಷ ಸಂವಾದ ನಡೆಯಲಿದೆ. ವಿದ್ಯಾರ್ಥಿಗಳಿಂದ ಬಣ್ಣದ ಝೇಂಕಾರ, ಗಾಯನ, ನೃತ್ಯ ನಡೆಯಲಿದೆ.