ಡಿ.25ರಂದು ಮಂಜನಾಡಿಯ ಅಲ್ ಮದೀನ ವಿದ್ಯಾಸಂಸ್ಥೆಯ ಕ್ಯಾಂಪಸ್ ನಲ್ಲಿ ಸ್ನೇಹ ಮಿಲನ‌ ಕಾರ್ಯಕ್ರಮ

ಡಿ.25ರಂದು ಮಂಜನಾಡಿಯ ಅಲ್ ಮದೀನ ವಿದ್ಯಾಸಂಸ್ಥೆಯ ಕ್ಯಾಂಪಸ್ ನಲ್ಲಿ ಸ್ನೇಹ ಮಿಲನ‌ ಕಾರ್ಯಕ್ರಮ


ಮಂಜನಾಡಿಯ ಅಲ್ ಮದೀನ ವಿದ್ಯಾಸಂಸ್ಥೆಯ ಕ್ಯಾಂಪಸ್ ನಲ್ಲಿ ಡಿ.25ರಂದು ಸ್ನೇಹ ಮಿಲನ‌ ಕಾರ್ಯಕ್ರಮ ನಡೆಯಲಿದೆ.

ಕಳೆದ 29 ವರ್ಷಗಳ ಹಿಂದೆ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು ಅಲ್ ಮದೀನ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿದ್ದರಯ. ಇಲ್ಲಿ 5 ಸಾವಿರಕ್ಕಿಂತ ಹೆಚ್ಚು  ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿದ್ಯಾಭ್ಯಾಸ ಪಡೆದಿರುತ್ತಾರೆ‌. ಅವರೆಲ್ಲರನ್ನು ಒಟ್ಟುಗೂಡಿಸಿ ಅಲ್ ಮದೀನ ಕ್ಯಾಂಪಸ್ ನಲ್ಲಿ ಸ್ನೇಹ ಮಿಲನ‌ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನ (ಜನರಲ್ ಮ್ಯಾನೇಜರ್ ಅಲ್ ಮದೀನ) ಉದ್ಘಾಟಿಸಲಿದ್ದಾರೆ. ಜಿ‌.ಎಂ. ಮುಹಮ್ಮದ್ ಖಾಮಿಲ್ ಸಖಾಫಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮುಹಮ್ಮದ್ ಕುಂಞಿ ಅಮ್ಜದಿ, ಅಬ್ದುಲ್ಲ ಅಹ್‌ಸನಿ, ರಝಾಕ್ ಮಾಸ್ಟರ್ ನಾವೂರು ಮುನೀರ್ ಸಖಾಫಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷ ಶರೀಫ್ ಸಹದಿ ಹಾಗೂ ಪ್ರಧಾನ ಕಾರ್ಯದರ್ಶಿ ಇಕ್ಬಾಲ್  ಮರ್ಝೂಕಿ ಅಸ್ಸಖಾಫ್, ಉಪಾಧ್ಯಾಕ್ಷ, ನ್ಯಾಯವಾದಿ ಮಹಮ್ಮದ್ ಅಸ್ಗರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article