ಮಂಗಳೂರಿಗೆ ಐಷಾರಾಮಿ 'ಎಮ್ ಎಸ್ ನೌಟಿಕಾ ' ಪ್ರಯಾಣಿಕ ಹಡಗು ಆಗಮನ
Thursday, December 15, 2022
ಮಂಗಳೂರು: ಪ್ರಸಕ್ತ ಋತುವಿನ ಮೂರನೇ ಐಷಾರಾಮಿ ಪ್ರಯಾಣಿಕ ಹಡಗು ಪಣಂಬೂರು ನವ ಮಂಗಳೂರು ಪೋರ್ಟ್ ನಲ್ಲಿ ಲಂಗರು ಹಾಕಿದೆ. "ಎಮ್ ಎಸ್ ನೌಟಿಕಾ" ಈ ಐಷಾರಾಮಿ ಹಡಗು ಮಸ್ಕತ್ ನಿಂದ ಇಂದು ಮುಂಜಾನೆ ಆರಕ್ಕೆ ಆಗಮಿಸಿದೆ.
548 ಪ್ರಯಾಣಿಕರು ಮತ್ತು 397 ಸಿಬ್ಬಂದಿಯನ್ನು ಹೊತ್ತು ತಂದಿರುವ ಈ ಹಡಗು ಮಾಲ್ಡೀವ್ಸ್ ಗೆ ಹೋಗುವ ಮಾರ್ಗದಲ್ಲಿ ಮಸ್ಕತ್‌ನಿಂದ ಭಾರತಕ್ಕೆ ಆಗಮಿಸಿದೆ. ಈ ಹಿಂದೆ ಐಶಾರಾಮಿ ಹಡಗು ಮುಂಬೈ ಹಾಗೂ ಗೋವಾ ಬಂದರಿನಲ್ಲಿ ಲಂಗರು ಹಾಕಿತ್ತು.
ಪ್ರಯಾಣಿಕರಿಗೆ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು 2 ಬಸ್‌ಗಳು ಸೇರಿದಂತೆ 18 ಕೋಚ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕ್ರೂಸ್ ಪ್ರಯಾಣಿಕರು ಕ್ರೂಸ್ ಲಾಂಜ್‌ನೊಳಗೆ ಆಯುಷ್ ಇಲಾಖೆಯ ವತಿಯಿಂದ ಧ್ಯಾನ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ಸಹ ತೆರೆಯಲಾಗಿದೆ.
ವಿದೇಶಿ ಪ್ರಯಾಣಿಕರು ಮಂಗಳೂರು ಮತ್ತು ಸುತ್ತಮುತ್ತಲಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಕಾರ್ಕಳ ಗೋಮಟೇಶ್ವರ ಪ್ರತಿಮೆ, ಸೋನ್ಸ್ ಫಾರ್ಮ್, ಮೂಡಬಿದಿರೆಯ ಸಾವಿರಗಂಬದ ಬಸದಿ, ಸೈಂಟ್ ಅಲೋಶಿಯಸ್ ಚಾಪೆಲ್ ಹಾಗೂ ಅಚಲ್ ಗೋಡಂಬಿ ಕಾರ್ಖಾನೆಗಳಿಗೆ ಭೇಟಿ ನೀಡಿದೆ.