ಕೋವಿಡ್ ನಿಂದ ರಕ್ಷಿಸಲು ಚೀನಾ ದಂಪತಿಗಳ ಹೊಸ ತಂತ್ರ;ಪ್ಲಾಸ್ಟಿಕ್ ಕೊಡೆ ಧರಿಸಿ ಮಾರ್ಕೆಟ್ ಗೆ ಬಂದ ಸತಿ ಪತಿ
Sunday, December 25, 2022
ನವದೆಹಲಿ: ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ದೇಶಾದ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ನಿಂದ ರಕ್ಷಿಸಲು ಇರುವ ಕೊಡೆಯೊಂದನ್ನು ಧರಿಸಿಕೊಂಡಿರುವ ದಂಪತಿಯ ವೀಡಿಯೋ ವೈರಲ್ ಆಗಿದೆ.
ಮಾರುಕಟ್ಟೆಗೆ ಬಂದಿದ್ದ ದಂಪತಿ ದೊಡ್ಡ ಪ್ಲ್ಯಾಸ್ಟಿಕ್ ನೊಳಗಡೆಯೇ ಬಂದಿದ್ದಾರೆ. ಇದೊಂದು ಕೊಡೆ, ಈ ಕೊಡೆಯೊಳಗಡೆ ಇಬ್ಬರು ಇರಬಹುದು. ಮಾರುಕಟ್ಟೆಗೆ ಬಂದ ದಂಪತಿಗಳು ಕೊಡೆಯ ಪ್ಲ್ಯಾಸ್ಟಿಕನ್ನು ಸ್ವಲ್ಪ ಮೇಲಕ್ಕೆತ್ತಿ ಹಣ ಕೊಡುತ್ತಾರೆ. ಯಾರೊಂದಿಗೂ ಮಾತನಾಡದೆ, ಕೋವಿಡ್ ನಿಂದ ರಕ್ಷಿಸಲು ಇದೊಂದು ಉತ್ತಮ ಉಪಾಯವೆಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಈ ವೀಡಿಯೋವನ್ನು ಡೈಲಿ ಚೀನಾ ಪೋಸ್ಟ್ ಮಾಡಿದ್ದು, ಉಮಾಶಂಕರ್ ಎನ್ನುವವರು ಹಂಚಿಕೊಂಡಿದ್ದಾರೆ, ಇದುವರೆಗೆ 50 ಸಾವಿರಕ್ಕೂ ಅಧಿಕ ಮಂದಿ ವೀಡಿಯೋವನ್ನು ವೀಕ್ಷಿಸಿದ್ದಾರೆ.
कोरोना संक्रमण से बचने के लिये चीन में इस तरह के उपाय अपनाए जा रहे हैं👇pic.twitter.com/MGB5jVapX8
— Umashankar Singh उमाशंकर सिंह (@umashankarsingh) December 25, 2022