ಖಾಲಿ ಪೆಟ್ಟಿಗೆಯಲ್ಲಿ ಮಗು ಇಟ್ಟು ರಸ್ತೆ ಬದಿ ಬಿಸಾಕಿದ ಪೋಷಕರು

ಖಾಲಿ ಪೆಟ್ಟಿಗೆಯಲ್ಲಿ ಮಗು ಇಟ್ಟು ರಸ್ತೆ ಬದಿ ಬಿಸಾಕಿದ ಪೋಷಕರು

ಕಾರವಾರ:ಹಸುಗೂಸೊಂದನ್ನು ಖಾಲಿ ಪೆಟ್ಟಿಗೆಯಲ್ಲಿ ತುಂಬಿ ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಕಾರವಾರದ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರ ತಾಲೂಕಿನ ತ್ಯಾರ್ಸಿ ತಿರುವಿನ ಹತ್ತಿರದಲ್ಲಿ ಗುಡ್ಡೆಕೊಪ್ಪ ಹೋಗುವ  ರಸ್ತೆಯಲ್ಲಿ  ಮಗುವನ್ನು ಪೆಟ್ಟಿಗಯಲ್ಲಿ ತುಂಬಿ ಬಿಸಾಕಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳಾ ಮತ್ತು ಶಿಶು ಕಲ್ಯಾಣ ಅಧಿಕಾರಿ ಪೂರ್ಣಿಮಾ ದೊಡ್ಮನಿ ಅವರನ್ನು ಸಂಪರ್ಕಿಸಿದ್ದಾರೆ. ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತಂದು ಹಾಲುಣಿಸಿ ಉಪಚರಿಸಲಾಗಿದೆ.

ಶಿಶು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ದೊಡ್ಮನಿ ಮಗುವನ್ನು ಶಿರಸಿಯ ದತ್ತು ಮಕ್ಕಳ ಕೇಂದ್ರಕ್ಕೆ ತಲುಪಿಸಿದ್ದಾರೆ. ಸೀಳು ತುಟಿಯ ಮಗುವಾದ್ದರಿಂದ ಅಂಗವೈಕಲ್ಯ ಎಂಬ ಕಾರಣಕ್ಕೆ ಮಗುವನ್ನು ಬಿಟ್ಟುಹೋಗಿದ್ದಾರೋ ಅಥವಾ ಇನ್ನಾವುದೇ ಕಾರಣಕ್ಕೆ ಬಿಟ್ಟು ಹೋಗಿದ್ದಾರೋ ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಮಹಾಂತೇಶ ಕುಂಬಾರ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article