Mangalore: ಯಕ್ಷಗಾನ ರಂಗಸ್ಥಳವೇರಿತು ಕುಕ್ಕರ್

Mangalore: ಯಕ್ಷಗಾನ ರಂಗಸ್ಥಳವೇರಿತು ಕುಕ್ಕರ್

ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ರಾಷ್ಟ್ರಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಈ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ವಿಚಾರ ಯಕ್ಷಗಾನ ರಂಗಸ್ಥಳದಲ್ಲಿ ಸದ್ದು ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಹೌದು... ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳದ ನೂತನ ಪ್ರಸಂಗದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ವಿಚಾರ ಹಾಸ್ಯದ ರೂಪದಲ್ಲಿ ರಂಗಸ್ಥಳವೇರಿದೆ. ಮೇಳದ ಮುಖ್ಯ ಹಾಸ್ಯಗಾರ ದಿನೇಶ್ ಕೋಡಪದವು ಅವರು ಕುಕ್ಕರ್ ಸಹಿತ ರಂಗಸ್ಥಳಕ್ಕೆ ಬಂದಿದ್ದಾರೆ. ತನಗೆ ಉಳಿದುಕೊಳ್ಳಲು ಎಲ್ಲೂ ಒಂದು ಕೊಠಡಿ ದೊರಕದಿರುವುದಕ್ಕೆ ಇದೇ ಕಾರಣಕ ಕಾರಣವೆಂದು ಗೋಣಿಯಿಂದ ಕುಕ್ಕರ್ ಎತ್ತಿ ತೋರಿಸುತ್ತಾರೆ. ಕುಕ್ಕರ್ ನೋಡುತ್ತಲೇ ರಂಗಸ್ಥಳದಲ್ಲಿದ್ದ ಮತ್ತೊಬ್ಬ ಪಾತ್ರಧಾರಿ ಓಟಕ್ಕಿತ್ತಿದ್ದಾರೆ.

ಅವರು ರಂಗಸ್ಥಳದಿಂದ ಹೊರಗಡೆಯಿಂದ ಅದನ್ನು ಎಸೆದುಬಿಡು ಬ್ಲಾಸ್ಟ್ ಆಗುತ್ತದೆ ಎಂದು ಹೇಳುತ್ತಾರೆ. ಆಗ ಹಾಸ್ಯ ಪಾತ್ರಧಾರಿ 'ಇದನ್ನು ನಾನು ಅನ್ನ ಬೇಯಿಸಲು ತಂದಿರುವೆ' ಎಂದು ಹೇಳುತ್ತಾರೆ. 'ಮೊನ್ನೆ ಒಂದು ಕಡೆಯಲ್ಲಿ ಇದೇ ರೀತಿಯದ್ದೊಂದು ಬ್ಲಾಸ್ಟ್ ಆಗಿದೆ' ಎಂದು ಮತ್ತೊಬ್ಬ ಪಾತ್ರಧಾರಿ ಹೇಳುತ್ತಾರೆ. ಈ ಮೂಲಕ ಕುಕ್ಕರ್ ಬಾಂಬ್ ಸ್ಫೋಟದ ವಿಚಾರವನ್ನು ಹಾಸ್ಯದ ರೂಪದಲ್ಲಿ ರಂಗಸ್ಥಳಕ್ಕೆ ತರಲಾಗಿದೆ. ಪ್ರಸ್ತುತ ನಡೆಯುವ ವಿಚಾರಗಳನ್ನು ಹಾಸ್ಯ ರೂಪದಲ್ಲಿ ರಂಗಸ್ಥಳಕ್ಕೆ ತರುವಲ್ಲಿ ದಿನೇಶ್ ಕೋಡಪದವು ಸಿದ್ಧಹಸ್ತರು‌. ಈ ಹಿಂದೆ ಇದೇ ದಿನೇಶ್ ಕೋಡಪದವು ಅವರು ಮಾಸ್ಕ್ ಧರಿಸಿ ರಂಗಸ್ಥಳವೇರಿದ್ದರು. ಅದೇ ರೀತಿ ಎಂಪಿ ನಳಿನ್ ಕುಮಾರ್ ಕಟೀಲು ಅವರು 3000 ರೂ‌ಪಾಯಿಗೆ ಮನೆಮನೆಗೆ ಹೊಯಿಗೆ ಕೊಡುತ್ತೇವೆ ಎಂದು ಹೇಳಿದ್ದ ವಿಚಾರವನ್ನು ಹಾಸ್ಯದ ರೂಪದಲ್ಲಿ ಹೇಳಿ ಪ್ರೇಕ್ಷಕರನ್ನು ರಂಜಿಸಿದ್ದರು.

 ಯಕ್ಷಗಾನ ಸಂಪ್ರದಾಯಿಕ,ಆರಾಧನಾ ಕಲೆಯಾಗಿದ್ದು ಈ ರೀತಿಯ ಹಾಸ್ಯ ಸನ್ನಿವೇಶ ಸೃಷ್ಟಿಸಿರುವುದಕ್ಕೆ ಯಕ್ಷಗಾನ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಸನ್ನಿವೇಶ ಕೋಮುಭಾವನೆ ಕೆರಳಿಸಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.
Video


Ads on article

Advertise in articles 1

advertising articles 2

Advertise under the article