Mangalore: ಖ್ಯಾತ ಚಿತ್ರನಟ ಸುದೀಪ್ ಕಟೀಲು ದೇವಳಕ್ಕೆ ಭೇಟಿ;ಪತ್ನಿ ಪ್ರಿಯಾ ಜೊತೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ
Sunday, December 4, 2022
ಮಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಕಟೀಲು ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಪ್ರಿಯಾ ಅವರ ಜೊತೆ ಕಟೀಲು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮ ಪ್ರಯುಕ್ತ ಮಂಗಳೂರಿಗೆ ಆಗಮಿಸಿದ್ದ ಸುದೀಪ್ ಮಧ್ಯಾಹ್ನ ಕಟೀಲಿಗೆ ಬಂದಿದ್ದು ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡು ಆತ್ಮೀಯ ಗೌರವ ಸಮರ್ಪಿಸಲಾಯಿತು. ಅರ್ಚಕರು ಶಾಲು ಹೊದಿಸಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ನಟ ಸುದೀಪ್, ಕರಾವಳಿಗೆ ಬಂದು ಕನ್ನಡ ಮಾತಾಡೋಕೂ ಕಷ್ಟ ಆಗುತ್ತೆ. ಇಲ್ಲಿ ಕಾಲಿಡುತ್ತಿದ್ದಂತೆ ಪಾಸಿಟಿಟವ್ ಅನುಭವ ಆಗುತ್ತಿದೆ. ಇಲ್ಲಿನ ಸಿಂಪಲ್ ದೇವಸ್ಥಾನ, ದೇವಾಲಯದ ಸಿಂಪ್ಲಿಸಿಟಿ ನನಗೆ ತುಂಬಾ ಇಷ್ಟವಾಯಿತು. ಮತ್ತೆ ಮತ್ತೆ ಇಲ್ಲಿಗೆ ಬರ್ಬೇಕು ಅನಿಸಿದೆ. ಖಂಡಿತಾ ಬರುತ್ತೇನೆ, ಇಲ್ಲಿನ ಜನರೂ ನನಗಿಷ್ಟ ಎಂದರು.