![ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಹೊಸತಂತ್ರ ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಹೊಸತಂತ್ರ](https://blogger.googleusercontent.com/img/b/R29vZ2xl/AVvXsEgtikM3YV0mOla6TTwmD-wai87y5lS7SHAXX5ARFHjKmKzuPLfs0bx7FHhOJHfHPGSc1wzo3cxLHgG-BQPR1GaKJ4I4BAjw03iz0yDQu1R6QCUI8KlMRVfpGaBztfveXIGgOzfDR5vjYvI/s1600/1672380455108458-0.png)
ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಹೊಸತಂತ್ರ
Thursday, December 29, 2022
ಮಂಗಳೂರು: ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಹೆಚ್ವುತ್ತಿರುವ ಲವ್ ಜಿಹಾದ್ ಪ್ರಕರಣಗಳಿಂದ ಆತಂಕಗೊಂಡ ಕರಾವಳಿಯ ಹಿಂದೂ ಸಂಘಟನೆಗಳು ಈ ಯತ್ನ ತಡೆಯುವ ಉದ್ದೇಶದಿಂದ ಹೆಲ್ಪ್ ಲೈನ್ ತಂತ್ರ ಹೂಡಿದೆ.
ಮನೆಯಲ್ಲಿ, ನೆರೆಹೊರೆಗಳಲ್ಲಿ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ ಎಂದು ಎರಡು ವಾಟ್ಸ್ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. ಅಲ್ಲದೆ ಇಮೇಲ್ ಐಡಿಯನ್ನು ನೀಡಲಾಗಿದೆ. ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ಕರೆ ನೀಡಿದೆ.
ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವ ಸಾಧ್ಯತೆ ಅಧಿಕವಾಹಿದೆ. ಆದ್ದರಿಂದ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ ಗೆ ಸಂಪರ್ಕಿಸಿ. ಹೆತ್ತವರು, ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಿ. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುತ್ತದೆ. ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ ಎಂದು ಟ್ಯಾಗ್ ಲೈನ್ ಇರುವ ಈ ಪೋಸ್ಟರ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಲವ್ ಜಿಹಾದ್ ಹೆಲ್ಪ್ ಲೈನ್ ಮೊಬೈಲ್ ಸಂಖ್ಯೆ: 9148658108, 9591658108
ಇಮೇಲ್ ಐಡಿ: antilovejihadmlr@gmail.com