ಮಂಗಳೂರು: ಹೆಲ್ಮೆಟ್ ಹಾಕಿಲ್ಲವೆಂದು ಕಾರುಚಾಲಕನಿಗೆ ನೋಟಿಸ್ ನೀಡಿದ ಸಂಚಾರಿ ಪೊಲೀಸರು
Friday, December 30, 2022
ಮಂಗಳೂರು: ಹೆಲ್ಮಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ದಂಡ ಭರಿಸಲು ಮನೆಗೆ ನೋಟಿಸ್ ಬರುವುದು ಮಾಮೂಲಿ. ಆದರೆ ಇಲ್ಲೊಬ್ಬರು ಕಾರು ಸವಾರರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ಪಾವತಿಯ ನೋಟಿಸ್ ಜಾರಿಗೊಳಿಸಿ ಮಂಗಳೂರು ಸಂಚಾರಿ ಪೊಲೀಸರು ಎಡವಟ್ಟು ಮಾಡಿಕೊಂಡಿದ್ದಾರೆ.
ನ.29ರಂದು ನಗರದ ಮಂಗಳಾದೇವಿಯಲ್ಲಿ ಕಾರಿನಲ್ಲಿ ಸಂಚರಿಸಿದ್ದ ಕಾರು ಮಾಲಕರ ಮನೆಗೆ ಸಂಚಾರ ಠಾಣೆಯಿಂದ ತಮ್ಮ ಸಹ ಸವಾರ ಹೆಲ್ಮೆಟ್ ಹಾಕಿಲ್ಲವೆಂಬ ಕಾರಣವೊಡ್ಡಿ ಡಿ.22ರಂದು 500ರೂ. ದಂಡಪಾವತಿಗೆ ಮನೆಗೆ ನೋಟಿಸ್ ಜಾರಿಯಾಗಿತ್ತು. ಪರಿಣಾಮ ವಿಚಲಿತರಾದ ಕಾರು ಮಾಲಕರು ಪರಿಶೀಲನೆ ನಡೆಸಿದಾಗ ಅಟೋಮೇಶನ್ ಸೆಂಟರ್‌ನಲ್ಲಿ ನಂಬರ್ ಗಮನಿಸುವಲ್ಲಿ ಎಡವಟ್ಟಾಗಿರುವುದು ಬಯಲಾಗಿದೆ.
ಕಾರು ಮಾಲಕರು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅದೇ ಅವಧಿಯಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ತೆರಳುತ್ತಿದ್ದರು. ಅವರಲ್ಲಿ ಸಹಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಆ ವಾಹನದ ಮೇಲೆ ದಂಡ ಹಾಕುವ ಬದಲು ಕಾರಿನ ಮಾಲಕರಿಗೆ ದಂಡ ವಿಧಿಸಿ ನೋಟಿಸ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ.