ನಟ ನರೇಶ್ ಜೊತೆ ಪವಿತ್ರ ಬಂಧನ,ಪರಸ್ಪರ ಚುಂಬಿಸಿ ಮದುವೆಯ ಗುಟ್ಟು ಬಿಚ್ಚಿಟ್ಟ ವಿವಾದಾತ್ಮಕ ಜೋಡಿ

ನಟ ನರೇಶ್ ಜೊತೆ ಪವಿತ್ರ ಬಂಧನ,ಪರಸ್ಪರ ಚುಂಬಿಸಿ ಮದುವೆಯ ಗುಟ್ಟು ಬಿಚ್ಚಿಟ್ಟ ವಿವಾದಾತ್ಮಕ ಜೋಡಿ

ಕಳೆದ ಹಲವು ತಿಂಗಳಿನಿಂದ  ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ನಡುವಿನ ಸಂಬಂಧದ ಬಗ್ಗೆ ಗಾಸಿಪ್ ಗಳು ಕೇಳಿಬರುತ್ತಿತ್ತು. ಇಬ್ಬರು ಮದುವೆ ಆಗಿದ್ದಾರೆ, ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದಿದ್ದವು. ಇದೀಗ ಈ ಸುದ್ದಿಗಳಿಗೆ ವಿವಾದಾತ್ಮಕ  ಜೋಡಿ ಬ್ರೇಕ್ ಹಾಕಿದೆ.
ಈ ಬಗ್ಗೆ ಅಧಿಕೃತವಾಗಿ ನಟ ನರೇಶ್ ಸ್ಪಷ್ಟನೆ ನೀಡಿದ್ದು, ಶೀಘ್ರದಲ್ಲೇ ಅವರು ಪವಿತ್ರಾ ಲೋಕೇಶ್ ಅವರೊಂದಿಗೆ ಮದುವೆ ಆಗಲಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ಗುಡ್ ನ್ಯೂಸ್ ಅನ್ನು ಅವರು ಹಂಚಿಕೊಂಡಿದ್ದಾರೆ.

ನರೇಶ್ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ವಿಡಿಯೋ ಟ್ವಿಟ್ ಮಾಡಿದ್ದು, ರೊಮ್ಯಾಂಟಿಕ್ ರೀತಿಯಲ್ಲಿ ಮದುವೆ ಘೋಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ನರೇಶ್ ಮತ್ತು ಪವಿತ್ರಾ ಅವರು ಕೇಕ್ ಕತ್ತರಿಸಿ ಪರಸ್ಪರ ಕೇಕ್ ತಿನ್ನಿಸಿ ಬಳಿಕ ತುಟಿಗೆ ಮುತ್ತಿಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


Ads on article

Advertise in articles 1

advertising articles 2

Advertise under the article