ಮಂಗಳೂರು: ರಾಜ್ಯದಲ್ಲಿ ಜಿಡಿಪಿಯಲ್ಲಿ ಮಂಗಳೂರಿಗೆ ಎರಡನೇ ಸ್ಥಾನ

ಮಂಗಳೂರು: ರಾಜ್ಯದಲ್ಲಿ ಜಿಡಿಪಿಯಲ್ಲಿ ಮಂಗಳೂರಿಗೆ ಎರಡನೇ ಸ್ಥಾನ


ಮಂಗಳೂರು: ಆರ್ಥಿಕ ಪ್ರಗತಿಯ ಅಳತೆಗೋಲಾದ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ)ಯಲ್ಲಿ ರಾಜ್ಯದಲ್ಲಿಯೇ ಮಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಹರ್ಷ ವ್ಯಕ್ತ ಪಡಿಸಿದರು.  
ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ 3ನೇ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಹುಬ್ಬಳ್ಳಿ ಅಥವಾ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಮೈಸೂರಿಗಿಂತಲೂ ಜಿಡಿಪಿಯಲ್ಲಿ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿನ ನಾಗರೀಕರು, ಉದ್ದಿಮೆದಾರರು, ಬ್ಯಾಂಕರುಗಳು, ಛೆಂಬರ್ ಆಫ್ ಕಾಮರ್ಸ್ ನವರು ಕಾರಣರಾಗಿದ್ದಾರೆ ಎಂದರು. 
ಬ್ಯಾಂಕುಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿಗದಿತ ಗುರಿ ತಲುಪದ ಬ್ಯಾಂಕುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಆ ಬ್ಯಾಂಕುಗಳಲ್ಲಿ ಸರ್ಕಾರದ ಹಣವಿದ್ದಲ್ಲಿ ತಕ್ಷಣ ಅದನ್ನು ತೆಗೆದು ಇತರೆ ಬ್ಯಾಂಕುಗಳಲ್ಲಿ ಇರಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು. 

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ, ತಲಾ ಆದಾಯ (ಪರ್ ಕ್ಯಾಪಿಟಲ್ ಇನ್‌ಕಮ್)ದಲ್ಲೂ ಮಂಗಳೂರು ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಕೈಗಾರಿಕೆಗಳು, ಉದ್ದಿಮೆಗಳು, ಹತ್ತು ಹಲವಾರು ವಾಣಿಜ್ಯ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಇದು ಸಾಧ್ಯವಾಗಿದೆ, ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಬ್ಯಾಂಕರ್ಸ್ ಗಳಿಗೆ ಅಭಿನಂದನೆ ಸಲ್ಲಬೇಕು ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article