120 ಮಂದಿ ಮಹಿಳೆಯರ ಅತ್ಯಾಚಾರಗೈದು ವಿಡಿಯೋ ಮಾಡುತ್ತಿದ್ದ ಅರ್ಚಕ ಜಿಲೇಬಿ ಬಾಬಾ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ
Sunday, January 8, 2023
ಚಂಡೀಗಢ: 120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹರಿಯಾಣದ ತೊಹಾನ ನಗರದಲ್ಲಿರುವ ಬಾಬಾ ಬಾಲಕನಾಥ್ ದೇವಾಲಯದ ಅರ್ಚಕ,ಅಮರ್‌ಪುರಿ ಅಲಿಯಾಸ್ ಜಿಲೇಬಿ ಬಾಬಾನನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸೋಮವಾರ ಈತನಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಮಹಿಳೆಯರಿಗೆ ಮತ್ತು ಬರುವ ಔಷಧ ನೀಡಿ, ಬ್ಲ್ಯಾಕ್ ಮ್ಯಾಜಿಕ್ ಮಾಡಿ ಅವರ ಮೇಲೆ ಅತ್ಯಾಚಾರ ಎಸಗುವ ಜತೆಗೆ ಅತ್ಯಾಚಾರದ ವಿಡಿಯೋ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಂತ್ರಸ್ತ ಮಹಿಳೆಯರು ದೂರು ನೀಡಿದ ಕಾರಣ ಜಿಲೇಬಿ ಬಾಬಾನ ಬಂಧನವಾಗಿತ್ತು. ಈಗ ಇವನನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.
ಜಿಲೇಬಿ ಅಂಗಡಿ ಇಟ್ಟಿದ್ದವ ಬಾಬಾ ಆಗಿದ್ದು ಹೇಗೆ...?
ಅಮರ್‌ಪುರಿ, ಆರಂಭದಲ್ಲಿ ತೊಹಾನ ರೈಲ್ವೆ ರೋಡ್‌ನಲ್ಲಿ ಜಿಲೇಬಿ ಅಂಗಡಿ ಇಟ್ಟಿದ್ದ. ತನ್ನ ಹೆಂಡತಿ ತೀರಿಕೊಂಡ ಬಳಿಕ ಬಾಬಾ ಆಗಿ ಬದಲಾಗಿದ್ದ. ಬ್ಲ್ಯಾಕ್ ಮ್ಯಾಜಿಕ್ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಈತನನ್ನು 2018ರಲ್ಲಿ ಫತೇಹಾಬಾದ್ ಡಿಎಸ್‌ಪಿ ಜೋಗಿಂದರ್ ಶರ್ಮಾ ಅವರು ಬಂಧಿಸಿದ್ದರು.