ಮಂಗಳೂರು ಕಂಬಳಕ್ಕೆ ಅದ್ದೂರಿ ತೆರೆ: 159 ಜೊತೆ ಕೋಣಗಳು ಭಾಗಿ

ಮಂಗಳೂರು ಕಂಬಳಕ್ಕೆ ಅದ್ದೂರಿ ತೆರೆ: 159 ಜೊತೆ ಕೋಣಗಳು ಭಾಗಿ


ಮಂಗಳೂರು: ಈ ಬಾರಿಯ ಮಂಗಳೂರು ರಾಮ - ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಇಂದು ಸಂಜೆ ಅದ್ದೂರಿ ತೆರೆ ಬಿದ್ದಿದೆ. ಕಂಬಳ ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಭಾಗವಹಿಸಿದ್ದವು. 

ಕನೆಹಲಗೆ ವಿಭಾಗದಲ್ಲಿ 5 ಜೊತೆ, ಅಡ್ಡಹಲಗೆಯಲ್ಲಿ 9 ಜೊತೆ, ಹಗ್ಗ ಹಿರಿಯದಲ್ಲಿ 19 ಜೊತೆ,  ನೇಗಿಲು ಹಿರಿಯದಲ್ಲಿ 29 ಜೊತೆ, ಹಗ್ಗ ಕಿರಿಯದಲ್ಲಿ 19 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 78 ಜೊತೆ ಕೋಣಗಳು ಭಾಗವಹಿಸಿದ್ದವು.
ಕಂಬಳ ಕ್ಷೇತ್ರದ ತಾರಾ ಓಟಗಾರ ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಈ ಬಾರಿಯೂ ಫೈನಲ್ ಪ್ರವೇಶಿಸಿ ಪದಕ ಬಾಚಿದ್ದಾರೆ. ಮಂಗಳೂರು ಕಬಳದಲ್ಲಿ ಸತತ ಆರನೇ ಬಾರಿ ಫೈನಲ್ ಪ್ರವೇಶ ಮಾಡಿರುವ ನಿಶಾಂತ್ ಶೆಟ್ಟಿ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ. ಈ ಬಾರಿ ನಿಶಾಂತ್ ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿಯವರ ಕೋಣಗಳನ್ನು ಓಡಿಸಿ ಪ್ರಥಮ ಸ್ಥಾನ ಬಾಚಿಕೊಂಡಿದ್ದಾರೆ. ಕಂಬಳ ಕ್ಷೇತ್ರದ ಶರವೇಗದ ಸರದಾರರೆಂದು ಪ್ರಸಿದ್ಧಿ ಪಡೆದ ಬೋಳದ ಬೊಲ್ಲಿ ಬೊಲ್ಲೆ ಹಾಗೂ ಚೆನ್ನೆ ಕೋಣಗಳು ಈ ಬಾರಿ ಮಂಗಳೂರು ಕಂಬಳದ ಜನಾಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
*ಮಂಗಳೂರು ಕಂಬಳ ಫಲಿತಾಂಶ - 2023*

*ಕನೆಹಲಗೆ* ( ನೀರು ನೋಡಿ ಬಹುಮಾನ)

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ

ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ


*ಅಡ್ಡಹಲಗೆ*


ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ 

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ


*ಹಗ್ಗ ಹಿರಿಯ*


ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್


*ಹಗ್ಗ ಕಿರಿಯ*


ಪ್ರಥಮ: ಬೇಳಿಂಜೆ ವಿಪಿನ್ ರೈ

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಮೂಡುಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ


*ನೇಗಿಲು ಹಿರಿಯ*

ಪ್ರಥಮ: ಗುರುಪುರ ಕಾರಮೊಗರು ಗುತ್ತು ಯಶ್ ಜಗದೀಶ್ ಆಳ್ವ 

ಓಡಿಸಿದವರು: ನಕ್ರೆ ಪವನ್ ಮಡಿವಾಳ್

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ


*ನೇಗಿಲು ಕಿರಿಯ*


ಪ್ರಥಮ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಕಟೀಲು ಕೊಡೆತ್ತೂರು ಕಿನ್ನೆಚ್ಚಿಲ್ ಲತಾ ಪ್ರಸಾದ್ ಶೆಟ್ಟಿ

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

Ads on article

Advertise in articles 1

advertising articles 2

Advertise under the article