ಮಂಗಳೂರು: ಏರ್ಪೋರ್ಟ್ ನಲ್ಲಿ ಕೇವಲ 18 ದಿನಗಳಲ್ಲಿ 2 ಕೋಟಿ ಮೌಲ್ಯದ ಅಕ್ರಮ ಸಾಗಾಟದ ಚಿನ್ನ‌ ವಶಕ್ಕೆ

ಮಂಗಳೂರು: ಏರ್ಪೋರ್ಟ್ ನಲ್ಲಿ ಕೇವಲ 18 ದಿನಗಳಲ್ಲಿ 2 ಕೋಟಿ ಮೌಲ್ಯದ ಅಕ್ರಮ ಸಾಗಾಟದ ಚಿನ್ನ‌ ವಶಕ್ಕೆ


ಮಂಗಳೂರು: ಏರ್ಪೋರ್ಟ್ ನಲ್ಲಿ 18 ದಿನಗಳ ಅವಧಿಯಲ್ಲಿ ಅಕ್ರಮ ಸಾಗಾಟದ ಬರೋಬ್ಬರಿ 2 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಜ.1 -ರಿಂದ 18ರ ನಡುವಿನ ಅವಧಿಯಲ್ಲಿ ದುಬೈ ಹಾಗೂ ಅಬುಧಾಬಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 8 ಮಂದಿ ಪುರುಷ ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದರು‌. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ವೇಳೆ ಪತ್ತೆ ಹಚ್ಚಿ ಈ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ, ಡಬಲ್ ಲೇಯರ್ಡ್ ವೆಸ್ಟ್ (ಬನಿಯನ್) ಒಳಗೆ ಪೇಸ್ಟ್ ರೂಪದಲ್ಲಿ, ಬಾಯಿಯೊಳಗಡೆ, ಗುದನಾಳ ಸೇರಿದಂತೆ ವಿವಿಧ ರೀತಿಯಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ 3677.000 ಗ್ರಾಂ ತೂಕದ 2,01,69.800 ರೂ‌. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ದುಬೈನಿಂದ ಆಗಮಿಸಿರುವ ಪ್ರಯಾಣಿಕನೋರ್ವನು 3,20,265 ರೂ. ಮೌಲ್ಯದ ಸಿಗರೇಟ್ ಮತ್ತು ಇ-ನಿಕೋಟಿನ್ ದ್ರವಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆತ ತನ್ನ ಬ್ಯಾಗ್ ನಲ್ಲಿ ಸಿಗರೇಟ್ ಹಾಗೂ ಇ-ನಿಕೋಟಿನ್ ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದ. ಪರಿಶೀಲನೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article