ಮಂಗಳೂರು: ಕದ್ರಿ ಜಾತ್ರಾಮಹೋತ್ಸವದಲ್ಲೂ ಅನ್ಯಧರ್ಮೀಯರಿಗೆ ವ್ಯಾಪಾರ ಬಹಿಷ್ಕಾರದ ಬ್ಯಾನರ್ ಅಳವಡಿಕೆ

ಮಂಗಳೂರು: ಕದ್ರಿ ಜಾತ್ರಾಮಹೋತ್ಸವದಲ್ಲೂ ಅನ್ಯಧರ್ಮೀಯರಿಗೆ ವ್ಯಾಪಾರ ಬಹಿಷ್ಕಾರದ ಬ್ಯಾನರ್ ಅಳವಡಿಕೆ


ಮಂಗಳೂರು: ಇತ್ತೀಚೆಗೆ ಕಾವೂರು ಜಾತ್ರಾಮಹೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್ ಅಳವಡಿಕೆಯಾಗಿತ್ತು. ಇದೀಗ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲೂ ಇದೇ ರೀತಿಯ ಬ್ಯಾನರ್ ಹಾಕಲಾಗಿದೆ.

ಕದ್ರಿ ದೇವಸ್ಥಾನದಲ್ಲಿ ಜ.15-25ರವರೆಗೆ ವಾರ್ಷಿಕ ಜಾತ್ರೆ ನಡೆಯುತ್ತಿದ್ದು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಿವಶಕ್ತ ಶಾಖೆ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಕೆ ಆಗಿದೆ. ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ಕುಕ್ಕರ್ ಬಾಂಬ್ ಆರೋಪಿ ಮೊದಲು ಟಾರ್ಗೆಟ್ ಮಾಡಿದ್ದು ಕದ್ರಿ ದೇವಸ್ಥಾನವನ್ನು. ಅಂತಹ ಮನಸ್ಥಿತಿ ಉಳ್ಳವರಿಗೆ ವಿಗ್ರಹಾರಾಧನೆಯನ್ನು ಹರಾಮ್ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಅನ್ಯಧರ್ಮೀಯರಿಗೆ ವ್ಯಾಪಾರ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತೆರವು ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article