ಮಂಗಳೂರು: ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನ ವಿತರಣೆ
Tuesday, January 10, 2023
ಮಂಗಳೂರು,ಜ.10(ಕ.ವಾ):- ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಗೃಹರಕ್ಷಕರ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ವೆಚ್ಚ ಸಹಾಯ ಧನವನ್ನು ನೀಡಲಾಗುತ್ತದೆ.
ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿಯಾದ ಹರಿಶ್ಚಂದ್ರ ಅವರ ಪುತ್ರಿ ಗೌತಮಿ ಕೆ.ಎಚ್ ಅವರ ಎರಡನೇ ವರ್ಷದ ಬಿಕಾಂ ಮತ್ತು ಸಿಎ ವ್ಯಾಸಂಗಕ್ಕಾಗಿ 5,000 ರೂ.ಗಳು ಕೇಂದ್ರ ಕಚೇರಿಯಿಂದ ಸಹಾಯ ಧನ ಮಂಜೂರಾಗಿದ್ದು, ಮೇರಿಹಿಲ್‍ನಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಜ.10ರ ಮಂಗಳವಾರ ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಅವರು ಚೆಕ್ ನೀಡಿದರು.
ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ ಎಂ., ಪ್ರಥಮ ದರ್ಜಿ ಸಹಾಯಕಿ ಅನಿತಾ ಟಿ.ಎಸ್, ಮೀನಾಕ್ಷಿ, ಗೃಹರಕ್ಷಕರಾದ ದಿವಾಕರ, ಸುನಿಲ್ ಕುಮಾರ್, ಧನಂಜಯ್, ವಿದೀಪ್, ರವಿ ಉಪಸ್ಥಿತರಿದ್ದರು.