ಸುರತ್ಕಲ್ ಪೇಟೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು

ಸುರತ್ಕಲ್ ಪೇಟೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು


ಮಂಗಳೂರು: ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಮಗುವನ್ನು ಪೋಷಕರು ಬಿಟ್ಟು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಪೋಷಕರು ಆಗಷ್ಟೇ ಸ್ನಾನ ಮಾಡಿಸಿ, ಪೌಡರ್ ಹಚ್ಚಿ ಸುರತ್ಕಲ್ ನ ಸದಾನಂದ ಹೋಟೆಲ್ ಬಳಿ ಈ ಹೆಣ್ಣು ಮಗುವನ್ನು  ಬಿಟ್ಟು ಹೋಗಿದ್ದಾರೆ. ಮಗು ಒಂಟಿಯಾಗಿರುವುದನ್ನು ಗಮನಿಸಿ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿರುತ್ತಾರೆ.ಕನ್ನಡ ಭಾಷೆ ಮಾತಾಡುವ ಈ ಮಗುವಿಗೆ ಸಂಬಂಧಪಟ್ಟವರು ಇದ್ದಲ್ಲಿ ದಯವಿಟ್ಟು ಈ ಕೆಳಕಂಡ ಸುರತ್ಕಲ್ ಠಾಣೆಯ ಫೋನ್ ನಂಬರ್ ಗಳಿಗೆ  ಸಂಪರ್ಕಿಸಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸುರತ್ಕಲ್ ಠಾಣಾ ಫೋನ್ ನಂಬರ್-08242220540
ಪೊಲೀಸ್ ನಿರೀಕ್ಷಕರ ಮೊಬೈಲ್ ನಂಬರ್-9480805360
ಪೊಲೀಸ್ ಉಪನಿರೀಕ್ಷಕರು ಮೊಬೈಲ್ ನಂಬರ್- 9480802344
ನಗರ ನಿಸ್ತಂತು ನಿಯಂತ್ರಣ ಕೊಠಡಿ ಮಂಗಳೂರು ನಗರ ಫೋನ್ ನಂಬರ್- 9480802321
ಮಹಿಳಾ ಸಮನ್ವಯ ಅಧಿಕಾರಿ -9448332713

Ads on article

Advertise in articles 1

advertising articles 2

Advertise under the article