ಮಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಡ್ರಗ್ಸ್ ಜಾಲದ ಬೆನ್ನತ್ತಿದ ಪೊಲೀಸರಿಂದ ಮತ್ತೆ ಮೂವರನ್ನು ಬಂಧನ
Wednesday, January 11, 2023
ಮಂಗಳೂರು: ನಗರದ ಪ್ರತಿಷ್ಠಿತ ವೈದ್ಯರ ಮತ್ತು ಮೆಡಿಕಲ್ ವಿದ್ಯಾರ್ಥಿಗಳ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಬಂಧಿಸಲಾಗಿದೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಪೆಥಾಲಜಿ ಎಂಡಿ ಓದುತ್ತಿದ್ದ ತುಮಕೂರು ಮೂಲದ ಹರ್ಷ ಕುಮಾರ್ ,ಡಿ ಫಾರ್ಮಾ ಅಂತಿಮ ವರ್ಷ ಓದುತ್ತಿದ್ದ ಕೊಚ್ಚಿ ಮೂಲದ ಆಡೋನ್ ದೇವ್ ಮತ್ತು ಮಂಗಳೂರು ಬಂದರಿನಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದ ಮಹಮ್ಮದ್ ಅಫ್ಸರ್ ಬಂಧಿತರು.
ಡ್ರಗ್ಸ್ ಜಾಲದಲ್ಲಿ ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ವೈದ್ಯರು, ವಿದ್ಯಾರ್ಥಿಗಳ ಭಾಗಿಯಾಗಿದ್ದು,ಈಗಾಗಲೇ ಇಬ್ಬರು ವೈದ್ಯರು, ಆರು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು.
ಡ್ರಗ್ಸ್ ಜಾಲದ ಕಿಂಗ್ ಪಿನ್ ಇಂಗ್ಲೆಂಡ್ ಪ್ರಜೆ ಕಿಶೋರಿಲಾಲ್ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆದಿದೆ.