ಪುತ್ತೂರು:ಮನೆಯಂಗಳದಲ್ಲಿ ಚೂರಿಯಿಂದ ಇರಿದು ಯುವತಿಯ ಹತ್ಯೆ
Tuesday, January 17, 2023
ಪುತ್ತೂರು: ಮನೆಗೆ ನುಗ್ಗಿ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಅಮಾನುಷ ಘಟನೆ ಪುತ್ತೂರು ತಾಲೂಕಿನ ಮುಂಡೂರಿನ ಕಂಪ ಎಂಬಲ್ಲಿ ನಡೆದಿದೆ.
ಗುರುವಪ್ಪ ಎಂಬವರ ಪುತ್ರಿ ಜಯಶ್ರೀ (23) ಕೊಲೆಯಾದ ಯುವತಿ. ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಅಪರಿಚಿತ ಯುವಕನೊಬ್ಬ ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕೂಡಲೇ ಆಕೆಯನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ದಾರಿಯಲ್ಲೇ ಅಸುನೀಗಿದ್ದಾಳೆ.
ಮನೆಯ ಅಂಗಳದಲ್ಲಿಯೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ವ್ಯಕ್ತಿ ಯಾಕಾಗಿ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿಲ್ಲ. ಪುತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.