ಉಪ್ಪಿನಂಗಡಿ:ಟಯರ್ ರಿಸೋಲ್ ಮಾಡುವ ಅಂಗಡಿಯಲ್ಲಿ ಸ್ಫೋಟ;ಓರ್ವ ಸಾವು
Wednesday, January 18, 2023
ಪುತ್ತೂರು; ಟಯರ್ ರಿಸೋಲ್ ಅಂಗಡಿಯೊಂದರಲ್ಲಿ ಏರ್ ಕಂಪ್ರೈಸರ್ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಜೇಶ್ ರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯದರೂ ಆಗಲೇ ಅವರು ಮೃತಪಟ್ಟಿದ್ದರು.ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.