ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ 'ಕ್ಯಾಪ್ಟನ್ ಕೂಲ್'
Saturday, January 7, 2023
ಮಂಗಳೂರು: ಕ್ರಿಕೆಟ್ ಲೋಕದ 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಕಾಸರಗೋಡಿಗೆ ಹೋಗಬೇಕಾದ ಮಹೇಂದ್ರ ಸಿಂಗ್ ಧೋನಿ ವಿಮಾನದ ಮೂಲಕ ಆಗಮಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಬಳಿಕ ಅವರು ರಸ್ತೆ ಮಾರ್ಗವಾಗಿ ಕೇರಳ ರಾಜ್ಯದ ಕಾಸರಗೋಡಿಗೆ ತೆರಳಲಿದ್ದಾರೆ. ಅವರು ತಮ್ಮ ಗೆಳೆಯ ಡಾ.ಶಾಜಿರ್ ಗಾಫರ್ ಅವರ ತಂದೆ ಪ್ರೊ.ಕೆ.ಕೆ.ಅಬ್ದುಲ್ ಗಾಫರ್ ಅವರ ಆತ್ಮಕಥೆ ಪುಸ್ತಕ ಬಿಡುಗಡೆ ಮಾಡಲು ಕಾಸರಗೋಡಿಗೆ ಆಗಮಿಸಿದ್ದಾರೆ. ಈ ವೇಳೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂ.ಎಸ್.ಧೋನಿಯವರಿಗೆ ಸ್ವಾಗತ ಕೋರಲಾಯಿತು.