ಪುತ್ತೂರು:  ನಾಯಿಗೆ ಕಾರು ಡಿಕ್ಕಿ ; ಬಂಪರಿನಲ್ಲಿ ಕುಳಿತು 70 ಕಿಮೀ ಜೊತೆಗೆ ಪ್ರಯಾಣಿಸಿದ ಶ್ವಾನ !

ಪುತ್ತೂರು: ನಾಯಿಗೆ ಕಾರು ಡಿಕ್ಕಿ ; ಬಂಪರಿನಲ್ಲಿ ಕುಳಿತು 70 ಕಿಮೀ ಜೊತೆಗೆ ಪ್ರಯಾಣಿಸಿದ ಶ್ವಾನ !

ಪುತ್ತೂರು: ಬೀದಿ ನಾಯಿಗಳು ರಸ್ತೆಯಲ್ಲಿ ವಾಹನಕ್ಕೆ ಡಿಕ್ಕಿಯಾಗುವುದು ಸಾಮಾನ್ಯ ಆದರೆ ಇಲ್ಲೊಂದು ಡಿಕ್ಕಿಯಾದ ನಾಯಿ ಕಾರಿನ ಬಂಪ‌ರಿನೊಳಗೆ ಕುಳಿತು ಪ್ರಯಾಣಿಸಿದ ಸ್ವಾರಸ್ಯಕರ ಘಟನೆ  ಪುತ್ತೂರಿನಲ್ಲಿ ನಡೆದಿದೆ. ಡಿಕ್ಕಿಯಾದ ನಾಯಿ ಸುಮಾರು 70 ಕಿಲೋ ಮೀಟರ್ ಪ್ರಯಾಣಿಸಿದ್ದು ಕಾರು ಮಾಲೀಕನ ಮನೆ ತಲುಪಿದೆ.
ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರ ಕುಟುಂಬ ಕಾರಿನಲ್ಲಿ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಬರುವ ದಾರಿಯಲ್ಲಿ ಬಂಪರ್‌ನೊಳಗೆ ನಾಯಿ ಸೇರಿಕೊಂಡಿತ್ತು. ಇವರಿದ್ದ ಕಾರಿಗೆ ಸುಬ್ರಹ್ಮಣ್ಯ- ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ನಾಯಿ ಡಿಕ್ಕಿ ಹೊಡೆದಿತ್ತು. ಕಾರು ನಿಲ್ಲಿಸಿದ್ದ ಸುಬ್ರಹ್ಮಣ್ಯ ಕೆಳಗಿಳಿದು ನೋಡಿದ್ದಾರೆ. ಆದರೆ ನಾಯಿ ಎಲ್ಲಿಯೂ ಕಂಡಿರಲಿಲ್ಲ. ನಾಯಿ ಓಡಿದೆ ಎಂದು ತಿಳಿದು ಕಾರನ್ನು ಚಲಾಯಿಸಿ ಮನೆಗೆ ಹಿಂದಿರುಗಿದ್ದರು.

ಮನೆಗೆ ಬಂದು ಕಾರಿನ ಬಾನೆಟ್ ತೆಗೆದು ಪರಿಶೀಲಿಸಿದಾಗ ಬಂಪರ್‌ ಒಳಗೆ ನಾಯಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮೆಕ್ಯಾನಿಕ್ ಅವರನ್ನು ಕರೆಸಿ ನಾಯಿಯನ್ನು ಹೊರಕ್ಕೆ ತೆಗೆದಿದ್ದಾರೆ. 70 ಕಿಮೀ ಪ್ರಯಾಣಿಸಿದ್ದರಿಂದ ನಾಯಿಗೆ ಹೊಸ ಊರಿಗೆ ಬಂದಂತಾಗಿದೆ.

Ads on article

Advertise in articles 1

advertising articles 2

Advertise under the article