ತೀರ್ಥಹಳ್ಳಿ: ಸ್ಮಶಾನದಲ್ಲಿ ಶವದ ಬೂದಿಯನ್ನೇ ಕದ್ದೊಯ್ದ ಕಳ್ಳರು
Friday, February 3, 2023
ತೀರ್ಥಹಳ್ಳಿ:ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಹಾಗೂ ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್‌ಗಳನ್ನು ಕಳ್ಳರು ಕದ್ದೊಯ್ದ ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊರಬೈಲಿನ ನಡೆದಿದೆ.
ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ 3 ದಿನಗಳ ಹಿಂದೆ ಊರಿನ ಮಹಿಳೆಯೊಬ್ಬರ ಶವವನ್ನು ಸಂಸ್ಕಾರ ಮಾಡಲಾಗಿತ್ತು. ಮಾರನೇ ದಿನ ಕುಟುಂಬದವರು ಸ್ಮಶಾನದಲ್ಲಿ ಅಳಿದುಳಿದ ಕಟ್ಟಿಗೆ ಕೊಳ್ಳಿಯನ್ನು ದೂಡುವ ಪದ್ಧತಿಯಂತೆ ಕಟ್ಟಿಗೆಯನ್ನು ಮುಂದೆ ಹಾಕಿ, ಒಂದು ಎಳನೀರು ಇಟ್ಟು ವಾಪಸ್ ಬಂದಿದ್ದರು. ಮೂರನೇ ದಿನ ವಾದ ಬುಧವಾರ ಸಂಸ್ಕಾರ ಮಾಡಿದ ಬೂದಿ ತೆಗೆಯಲು ಕುಟುಂಬಸ್ಥರು ಸ್ಮಶಾನಕ್ಕೆ ಬಂದಿದ್ದರು. ಆದರೆ, ಸುಟ್ಟಶವದ ಬೂದಿಯೇ ಮಂಗಮಾಯವಾಗಿತ್ತು. ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್‌ನ್ನು ಕೂಡ ಕದ್ದೊಯ್ದಿದ್ದರು. ಆದರೆ, ಮೂರು ಎಲುಬು ಮೂಳೆಯನ್ನು ಅಲ್ಲೆ ಬದಿಯಲ್ಲಿ ಇಟ್ಟಿ ದ್ದರು. ಬಳಿಕ, ಆ ಮೂರು ಮೂಳೆಗಳನ್ನು ತಂದು ಕುಟುಂ ಬಸ್ಥರು ಮುಂದಿನ ಕಾರ ನೆರವೇರಿಸಿದ್ದಾರೆ. ಶವಸಂಸ್ಕಾರ ಮಾಡುವಾಗ ಶವದ ಜೊತೆಯಲ್ಲಿ ಬಂಗಾರ, ಬೆಳ್ಳಿ, ಚಿಲ್ಲರೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟಿರಬಹುದು ಎಂಬುದಾಗಿ ಯೋಚಿಸಿ, ಕಳ್ಳರು ಬೂದಿ ಕದ್ದೊಯ್ದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.