ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 91.35 ಲಕ್ಷ ಮೊತ್ತದ ಚಿನ್ನ ವಶಕ್ಕೆ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 91.35 ಲಕ್ಷ ಮೊತ್ತದ ಚಿನ್ನ ವಶಕ್ಕೆ


ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಐವರು ಪ್ರಯಾಣಿಕರಿಂದ ಬರೋಬ್ಬರಿ 91.35 ಲಕ್ಷ ರೂ. ಮೊತ್ತದ ಅಕ್ರಮ ಸಾಗಾಟದ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಫೆ.1 ರಿಂದ 15ರ ನಡುವಿನ ಅವಧಿಯಲ್ಲಿ ದುಬೈ ಹಾಗೂ ಬಹರೈನ್ ದೇಶದಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಇವರಲ್ಲಿ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ. ಇವರು ಚಿನ್ನವನ್ನು ತೆಳುವಾದ ಪೇಸ್ಟ್ ಪದರದ ಒಳಗಡೆ ಬಚ್ಚಿಟ್ಟು ಟ್ರಾಲಿ ಬ್ಯಾಗ್‌ನ ಹಿಡಿಕೆಯಲ್ಲಿ, ಗುದನಾಳದಲ್ಲಿ, ಬಾಯಿಯೊಳಗಡೆ, ಬ್ಯಾಗ್ ನಡಿ ಭಾಗದಲ್ಲಿ ಅಂಟಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಈ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಹಚ್ಚಿರುವ ಕಸ್ಟಮ್ಸ್ ಅಧಿಕಾರಿಗಳು ಐವರು ಪುರುಷ ಪ್ರಯಾಣಿಕರಿಂದ 91,35,850 ರೂ. ಮೌಲ್ಯದ 1625.000 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 

ಅಲ್ಲದೆವಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ.IX 383 ಮೂಲಕ ದುಬೈಗೆ ಭಾರತದಿಂದ ಕಳ್ಳಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ಪ್ರಯಾಣಿಕನಿಂದ ಡಾಲರ್ ಹಾಗೂ ಪೌಂಡ್ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪುರುಷ ಪ್ರಯಾಣಿಕನಿದ 5100 US ಡಾಲರ್ ಮತ್ತು 2420 ಪೌಂಡ್ ಸ್ಟರ್ ಲಿಂಗ್ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

Ads on article

Advertise in articles 1

advertising articles 2

Advertise under the article