ಮಂಗಳೂರು: ಲಂಡನ್ ನಲ್ಲಿ 'ಯಕ್ಷ ತಾಂಡವ' - ಕಡಲಾಚೆ ಯಕ್ಷಗಾನದ ಕಂಪು ಪಸರಿಸಿದ ಕರಾವಳಿಯ ಕುವರ
Sunday, February 26, 2023
ಮಂಗಳೂರು: ದೂರದ ಲಂಡನ್ ನಲ್ಲಿ ಯಕ್ಷಗಾನದ ಕಂಪನ್ನು ಕರಾವಳಿಗರೋರ್ವರು ವಿಭಿನ್ನವಾಗಿ ಪಸರಿಸಿದ್ದಾರೆ. ಲಂಡನ್ ನ ಭಾರತೀಯ ವಿದ್ಯಾ ಭವನದಲ್ಲಿ ಶುಕ್ರವಾರ ಶಿವರಾತ್ರಿಯ ಪ್ರಯುಕ್ತ ವಿವಿಧ ನೃತ್ಯ ಪ್ರಕಾರಗಳ ತಾಂಡವ ನೃತ್ಯವನ್ನು ಪ್ರಸ್ತುತ ಪಡಿಸಲಾಗಿತ್ತು. ಇದರಲ್ಲಿ ಲೇಖಕ, ಯಕ್ಷಗಾನ ಕಲಾವಿದ ಯೋಗೀಂದ್ರ ಮರವಂತೆಯವರು ಯಕ್ಷಗಾನ ಶೈಲಿಯ ತಾಂಡವ ನೃತ್ಯವನ್ನು ಸಾದರಪಡಿಸಿದರು.
ನಟರಾಜನ ಸಪ್ತ ತಾಂಡವಗಳಲ್ಲಿ ಯೋಗೀಂದ್ರ ಮರವಂತೆಯವರು ಯಕ್ಷಗಾನ ಶೈಲಿಯ 'ಕಾಲಿಕಾ ತಾಂಡವ'ವನ್ನು ಪ್ರಸ್ತುತ ಪಡಿಸಿದರು. ಪ್ರಸನ್ನ ಭಟ್ ಬಾಳ್ಕಲ್ ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ ಅವರ ಹಿಮ್ಮೇಳವನ್ನು ಬಳಸಲಾಗಿತ್ತು. ಯೋಗಿಂದ್ರ ಮರವಂತೆಯವರು ಲಂಡನ್ ನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಲಂಡನ್ ನಲ್ಲಿ ಯಕ್ಷಗಾನದ ಕಂಪನ್ನು ಪಸರಿಸುತ್ತಿದ್ದಾರೆ.