ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ: ಶಂಕಿತ ಆರೋಪಿಯ ಫೋಟೋ ಬಿಡುಗಡೆ
Friday, February 10, 2023
ಮಂಗಳೂರು: ನಗರದಲ್ಲಿ ಬಲ್ಮಠ - ಹಂಪನಕಟ್ಟೆ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿಯನ್ನು ಫೆ.3ರಂದು ಮಧ್ಯಾಹ್ನ 3:30ರ ಸುಮಾರಿಗೆ ಹತ್ಯೆಗೈದು ಪರಾರಿಯಾಗಿರುವ ಶಂಕಿತ ಆರೋಪಿಯ ಫೋಟೋವನ್ನು ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಮಂಗಳೂರು ಜ್ಯುವೆಲ್ಲರ್ಸ್ ಗೆ ಆರೋಪಿ ಚಿನ್ನ ಖರೀದಿಸುವ ಗ್ರಾಹಕನ ಸೋಗಿನಲ್ಲಿ ಬಂದಿದ್ದಾನೆ. ಬಳಿಕ ಜ್ಯುವೆಲ್ಲರಿಯಲ್ಲಿದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ತಿವಿದು ಕೊಲೆ ಮಾಡಿರುತ್ತಾನೆ. ಜ್ಯುವೆಲ್ಲರಿ ಮಾಲಕ ಬರುವ ವೇಳೆಗೆ ಆರೋಪಿ 12 ಗ್ರಾಂ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ಈತನ ಭಾವಚಿತ್ರವು ಸೆರೆಯಾಗಿದೆ. ಈ ಶಂಕಿತ ಆರೋಪಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಈ ಕೆಳಕಂಡ ಅಧಿಕಾರಿಯವರ ಮೊಬೈಲ್ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು. ಮಂಗಳೂರು ನಗರ ಕೆಂದ್ರ ಉಪವಿಭಾಗ ಎಸಿಪಿ
ಮಹೇಶ್ ಕುಮಾರ್ -9480805320 ಹಾಗೂ ಮಂಗಳೂರು ನಗರದ ಸಿಸಿಬಿ ಎಸಿಪಿ ಪಿ.ಎ.ಹೆಗಡೆ 9945054333 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.