ಮಂಗಳೂರು: ಲಾಡ್ಜ್ ನಲ್ಲಿ ಕೇರಳ ಮೂಲದ ದಂಪತಿ ನೇಣಿಗೆ ಶರಣು
Wednesday, February 8, 2023
ಮಂಗಳೂರು: ನಗರದ ಫಳ್ನೀರ್ ರಸ್ತೆಯಲ್ಲಿರುವ ಬ್ಲೂಸ್ಟಾರ್ ಲಾಡ್ಜ್ ನಲ್ಲಿ ದಂಪತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಕೇರಳ ಕಣ್ಣೂರು ಮೂಲದ ರವೀಂದ್ರನ್ (55) ಹಾಗೂ ಸುಧಾ (50)ಆತ್ಮಹತ್ಯೆಗೆ ಶರಣಾದವರು.
ಫೆ.6ರಂದು ದಂಪತಿ ಲಾಡ್ಜ್ ಗೆ ಬಂದಿದ್ದರು. ಅಂದು ರಾತ್ರಿ ಲಾಡ್ಜ್ ಸಿಬ್ಬಂದಿ ಅವರನ್ನು ನೋಡಿದ್ದಾರೆ. ಆದರೆ ಆ ಬಳಿಕ ಅವರನ್ನು ಯಾರೂ ನೋಡಿರಲಿಲ್ಲ. ಇಂದೂ ಕೂಡಾ ಲಾಡ್ಜ್ ಕೊಠಡಿ ತೆರೆಯದ ಹಿನ್ನಲೆಯಲ್ಲಿ ಸಿಬ್ಬಂದಿ ಎಷ್ಟು ಬಾಗಿಲು ಬಡಿದರೂ ತೆರೆಯದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸರು ಲಾಡ್ಜ್ ಕೊಠಡಿ ಬಾಗಿಲು ಒಡೆದು ನೋಡಿದಾಗ ದಂಪತಿ ಜೊತೆಯಾಗಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ಜ.6ರಂದು ದಂಪತಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.