ಮಂಗಳೂರು: ಶಾಸಕ ಭರತ್ ಶೆಟ್ಟಿಯವರನ್ನು ಧರ್ಮಸ್ಥಳದಲ್ಲಿ ಆಣೆಗೆ ಆಹ್ವಾನಿಸಿದ ಬಾವಾ

ಮಂಗಳೂರು: ಶಾಸಕ ಭರತ್ ಶೆಟ್ಟಿಯವರನ್ನು ಧರ್ಮಸ್ಥಳದಲ್ಲಿ ಆಣೆಗೆ ಆಹ್ವಾನಿಸಿದ ಬಾವಾ


ಮಂಗಳೂರು: ದೇವಸ್ಥಾನದ ಪ್ರಸಾದವನ್ನು ಕಾಲಡಿಗೆ ಹಾಕಿ ತುಳಿದಿರುವ ಶಾಸಕ‌ ಭರತ್ ಶೆಟ್ಟಿಯವರ ಆರೋಪಕ್ಕೆ ನಾನು ಧರ್ಮಸ್ಥಳದಲ್ಲಿ ಹಾಗೂ ದರ್ಗಾದಲ್ಲಿ ಆಣೆಮಾಡಲು ಸಿದ್ಧ. ನಾನು ಬರುತ್ತೇನೆ ಅವರೂ ಬರಲಿ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಸವಾಲೆಸೆದರು.

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ದೇವಾಲಯಗಳಿಗೆ ಹೋಗಿ ಈಗಲೂ ಪ್ರಸಾದ ಸ್ವೀಕರಿಸುತ್ತೇನೆ‌. ಇದಕ್ಕೆ ದಾಖಲೆಗಳಿವೆ. ನಾನು ನನ್ನ ಧರ್ಮದೊಂದಿಗೆ ಬೇರೆ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಶಾಸಕ ಅವಧಿಯಲ್ಲಿ ದೇವಸ್ಥಾನ, ದೈವಸ್ಥಾನ, ಬಿಲ್ಲವ ಸಮುದಾಯ ಹಾಗೂ ಅಂಬೇಡ್ಕರ್ ಭವನಗಳಿಗೆ ಎಷ್ಟು ಅನುದಾನ ತಂದಿರುವುದಕ್ಕೆ ಆರ್ ಟಿಐನಿಂದ ದಾಖಲೆ ತೆಗೆದುಕೊಂಡು ಪರಿಶೀಲಿಸಲಿ ಎಂದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕಾಟಿಪಳ್ಳದ ಶ್ರೀಗಣೇಶಪುರ ದೇವಸ್ಥಾನಕ್ಕೆ 58 ಕೋಟಿ ಅನುದಾನ ತಾನು ತಂದಿದ್ದೆ. ಆ ಅನುದಾನವನ್ನು ಭರತ್ ಶೆಟ್ಟಿಯವರು ತನ್ನ ಅನುದಾನದಲ್ಲಿ 40ಕೋಟಿಯನ್ನು ಬೇರೆ ವಾರ್ಡ್ ಗಳ ವಿವಿಧ ಕಾಮಗಾರಿಗಳಿಗೆ ಹಂಚಿರುವ ದಾಖಲೆ ನನ್ನಲ್ಲಿದೆ. ಹಿಂದುತ್ವದ ಪರವಾಗಿ ಮಾತನಾಡುವ ಶಾಸಕರು ಹಿಂದುಗಳಿಗೆ ಎಷ್ಟು ಅನುದಾನ ತಂದಿದ್ದಾರೆಂದು ಪಟ್ಟಿ ಬಿಡುಗಡೆ ಮಾಡಲಿ. ಗೋಹತ್ಯೆ ವಿರೋಧಿಸುವ ಇವರು, ಕಪಿಲಾ ಗೋಶಾಲೆಯ ಎರಡು ಎಕ್ರೆ ಸ್ಥಳವನ್ನು ಕೋಸ್ಟಲ್ ಗಾರ್ಡ್ ಗೆ ನೀಡಿ ಶೆಡ್ ಒಡೆಯುವಾಗ ಗೋವುಗಳು ಮಳೆಯಲ್ಲಿ ನೆನೆಯುತ್ತಿದ್ದರೂ ಕನಿಕರ ತೋರಿಲ್ಲ. ಇವರು ವೈದ್ಯರಾಗಲು ಅನರ್ಹರು ಎಂದು ಕಿಡಿಕಾರಿದರು.

ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಪದೇಪದೇ ಬೆಂಕಿ ಅನಾಹುತ ಸಂಭವಿಸುತ್ತಿದ್ದು ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಇಂದಿನವರೆಗೆ ಸ್ಥಳಕ್ಕೆ ಭೇಟಿ ನೀಡಿದೆ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಮೂಲಕ ಪರಿಸರದ ಜನತೆಯ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಮಾರ್ಚ್ 17ರಂದು ಸಂಜೆ 4ಕ್ಕೆ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

Ads on article

Advertise in articles 1

advertising articles 2

Advertise under the article