ಬಂಟ್ವಾಳದಲ್ಲಿ ಮೂವರಿಗೆ ಹೆಜ್ಜೇನು ದಾಳಿ.ಒಬ್ಬನ ಸ್ಥಿತಿ ಗಂಭೀರ
Sunday, March 19, 2023
ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಕಲ್ಪನೆಯ ನಿವಾಸಿ ಪೂವಪ್ಪ (61) ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇನ್ನುಳಿದಂತೆ ಮಹೇಶ್ ಮತ್ತು ಗೋಪಾಲ್ ಎಂಬ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಪೂವಪ್ಪ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಪನೆಯಿಂದ ಬಿ.ಸಿ. ರೋಡ್‌ಗೆ ಬರಲು ಕಲ್ಪನೆ ಬಸ್ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.