coastal ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆ By day karnataka Thursday, March 30, 2023 ದೈವನರ್ತನದ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.ಕಡಬ ತಾಲೂಕಿನ ಎಡಮಂಗಲ ನಿವಾಸಿ ಕಾಂತು (60) ಸಾವಿಗೀಡಾದ ದೈವ ನರ್ತಕ. ಕಡಬದ ಇಡ್ಯಡ್ಕ ಎಂಬಲ್ಲಿ ಶಿರಾಡಿ ದೈವದ ಕೋಲ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.