ಮಂಗಳೂರು: ಖಾಸಗಿ ಬಸ್ ಧಾವಾಂತಕ್ಕೆ ಮತ್ತೊಂದು ಬಲಿ - ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು
Thursday, March 30, 2023
ಮಂಗಳೂರು: ನಗರದಲ್ಲಿ ಖಾಸಗಿ ಬಸ್ ಗಳ ಧಾವಂತಕ್ಕೆ ಒಂದೇ ವಾರದೊಳಗಡೆ ಎರಡನೇ ಬಲಿಯಾಗಿದೆ. ಮಾರ್ಚ್ 24ರಂದು ತಾಯಿ - ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ಸೊಂದು ಢಿಕ್ಕಿ ಹೊಡೆದು ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ನೆನಪು ಮಾಸುವ ಮುನ್ನ ಇಂದು ಬೆಂದೂರುವೆಲ್ ನಲ್ಲಿ ಮತ್ತೊಂದು ಅಪಘಾತ ನಡೆದು ಮಹಿಳೆಯೋರ್ವರು ದುರ್ಮರಣಕ್ಕೀಡಾಗಿದ್ದಾರೆ.
ಐರಿನ್ ಡಿಸೋಜ(65) ಅಪಘಾತಕ್ಕೆ ಬಲಿಯಾದ ಮಹಿಳೆ.
ಐರಿನ್ ಡಿಸೋಜ ಮಧ್ಯಾಹ್ನ 12ರ ಸುಮಾರಿಗೆ ಬೆಂದೂರುವೆಲ್ ಸರ್ಕಲ್ ನಲ್ಲಿ ಆ್ಯಸ್ಲೇನ್ ಟ್ರಾವೆಲ್ಸ್ ಬಸ್ ಸರಿಪಲ್ಲದಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಬಸ್ ಆ್ಯಗ್ನೇಸ್ ಸರ್ಕಲ್ ನಿಂದ ಬೆಂದೂರುವೆಲ್ ಸರ್ಕಲ್ ಕಡೆಗೆ ಬಂದಿದೆ. ಅಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದು, ಪ್ರಯಾಣಿಕರನ್ನು ಇಳಿದಿದ್ದಾರೆ. ಈ ವೇಳೆ ಅದೇ ಬಸ್ ನಿಂದ ಬೆಂದೂರುವೆಲ್ ಸರ್ಕಲ್ ನಲ್ಲಿ ಇಳಿದ ಐರಿನ್ ಡಿಸೋಜ ಅವದು ಬಸ್ ಮುಂಭಾಗದಿಂದ ರಸ್ತೆಯನ್ನು ದಾಟುತ್ತಿದ್ದರು.
ಈ ವೇಳೆ ಬಸ್ ಚಾಲಕ ಏಕಾಏಕಿ ಅಜಾಗರೂಕತೆಯಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮ ಬಸ್ ಐರಿನ್ ಡಿಸೋಜ ಅವರಿಗೆ ಡಿಕ್ಕಿಯಾಗಿದ್ದು ಅವರು ಕೆಳಗೆ ಬಿದ್ದ ವೇಳೆ ಅವರ ಮೇಲೆಯೇ ಬಸ್ ಮುಂಭಾಗದ ಬಲ ಚಕ್ರ ಹರಿದು ಹೋಗಿ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಹಾಗೂ ಪೊಲೀಸರು ಸ ದೌಢಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ಬಸ್ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಪದೇಪದೇ ನಗರದಲ್ಲಿ ಇಂತಹ ಅಪಘಾತಗಳು ನಡೆದು ಸಾವು - ನೋವು ಸಂಭವಿಸುತ್ತಿದ್ದು, ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಪೊಲೀಸ್ ಆಯುಕ್ತರು ಬರಬೇಕೆಂದು ಪಟ್ಟು ಹಿಡಿದಿದ್ದಾರೆ.