ಮುಲ್ಕಿ ಕೊಯಿಕುಡೆ ಸರಕಾರಿ ಶಾಲೆಗೆ ಪೀಠೋಪಕರಣ ಕೊಡುಗೆ
Tuesday, July 25, 2023
ಸರ್ಕಾರಿ ಶಾಲೆಗೆ ಪೀಠೋಪಕರಣ ಕೊಡುಗೆ ಕಾರ್ಯಕ್ರಮ ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯಿಕುಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಮಂಗಳೂರಿನ ಉದ್ಯಮಿ ರಾಜೇಶ್ ಶೆಟ್ಟಿ ಗೊಲ್ಲರಬೆಟ್ಟು ಶಾಲೆಗೆ ಪೀಠೋಪಕರಣ ಹಸ್ತಾಂತರ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.ಸರಕಾರಿ ಶಾಲಾ ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗಬಾರದು. ತರಗತಿ ಕೋಣೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಸೀನರಾಗಿ ತಮ್ಮ ಪಾಠಗಳನ್ನು ಓದಿ ಬರೆಯಲು ಉತ್ತಮ ಪೀಠೋಪಕರಣ ಅವರಿಗೆ ಸಿಗುವಂತಾಗಬೇಕು ಎಂದರು.
ಮುಖ್ಯ ಶಿಕ್ಷಕಿ ವೀಣಾ ಕುಮಾರಿಯವರು ಶ್ರೀ ರಾಜೇಶ್ ಶೆಟ್ಟಿ ಅವರ ಈ ಕೊಡುಗೆಗೆ ಶ್ಲಾಘನೆ ವ್ಯಕಪಡಿಸಿ, ಹೀಗೆ ಸಮುದಾಯದಲ್ಲಿ ದಾನಿಗಳು ಮುಂದೆ ಬಂದು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದರೆ ಸರಕಾರಿ ಶಾಲೆಗಳು ಭೌತಿಕ ಮಟ್ಟದಲ್ಲಿ ಉನ್ನತಕ್ಕೆ ಏರಲು ಸಾಧ್ಯವಾಗುವುದು ಎಂದು ಹೇಳಿದರು.
ಸಹ ಶಿಕ್ಷಕಿ ಮಹಮಾಯಿ ಸ್ವಾಗತಿಸಿದರು. ಶಿಕ್ಷಕಿ ವಿನೋದ ಕಾರ್ಯಕ್ರಮ ನಿರೂಪಿಸಿದರು.ಜಯ ವಂದಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.