ಮಂಗಳೂರು: ಕೇರಳದಲ್ಲಿ ಅಜ್ಜ - ಅಜ್ಜಿಯನ್ನೇ ಕೊಲೆಗೈದು ಚಿನ್ನಾಭರಣ ದರೋಡೆ - ಎರಡೇ ದಿನದಲ್ಲಿ ಕುಡ್ಲದಲ್ಲಿ ಖತರ್ನಾಕ್ ಖದೀಮ ಅರೆಸ್ಟ್

ಮಂಗಳೂರು: ಕೇರಳದಲ್ಲಿ ಅಜ್ಜ - ಅಜ್ಜಿಯನ್ನೇ ಕೊಲೆಗೈದು ಚಿನ್ನಾಭರಣ ದರೋಡೆ - ಎರಡೇ ದಿನದಲ್ಲಿ ಕುಡ್ಲದಲ್ಲಿ ಖತರ್ನಾಕ್ ಖದೀಮ ಅರೆಸ್ಟ್


ಮಂಗಳೂರು: ಕೇರಳದಲ್ಲಿ ತನ್ನ ಅಜ್ಜ - ಅಜ್ಜಿಯನ್ನೇ ಕೊಲೆಗೈದು ದೋಚಿದ ಚಿನ್ನಾಭರಣವನ್ನು‌ ಮಂಗಳೂರಿಗೆ ಮಾರಾಟ ಮಾಡಲು ಬಂದಿರುವ ಖದೀಮನೋರ್ವನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶ್ಶೂರ್ ಜಿಲ್ಲೆಯ ವೈಲತ್ತೂರು ಗ್ರಾಮದ ಅಹಮ್ಮದ್ ಅಕ್ಕಲ್(27) ಬಂಧಿತ ಆರೋಪಿ.
ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಚಿನ್ನಾಭರಣ ಮಳಿಗೆಗೆ ಜುಲೈ 24ರಂದು ಅನುಮಾನಾಸ್ಪದ ವ್ಯಕ್ತಿಯೊಬ್ಬ ಬಂಗಾರದ ಒಡವೆಗಳನ್ನು ಮಾರಾಟ ಮಾಡಲು ಬಂದಿದ್ದ. ಆದರೆ ಚಿನ್ನದ ಮಳಿಯವರಿಗೆ ಆತನ ಮೇಲೆ ಅನುಮಾನ ಬಂದು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಆತ ಕೇರಳ ರಾಜ್ಯದವನು. ಹೆಸರು ಅಹಮ್ಮದ್ ಅಕ್ಕಲ್ ಎಂದು ತಳಿದು ಬಂದಿದೆ. ಬಳಿಕ ಆತನನ್ನು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಡಬ್ಬಲ್ ಮರ್ಡರ್ ವಿಚಾರ ಬಯಲಾಗಿದೆ. ಅಹಮ್ಮದ್ ಅಕ್ಕಲ್, ವಡೆಕ್ಕೆಕಾಡ್ ನಲ್ಲಿ ಜುಲೈ 23ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನೇ ಕೊಲೆಗೈದು ಅವರ ಚಿನ್ನಾಭರಣಗಳನ್ನು ದೋಚಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನಿಂದ 1 ಮುತ್ತಿನ ಎರಡು ಎಳೆಯ ಬಂಗಾರದ ಸರ, 1  ಸಣ್ಣ ಪದಕವಿರುವ ಚೈನ್, 3 ಕಿವಿಯೊಲೆಗಳು, 5 ಉಂಗುರಗಳು, 2 ಕೈಬಳೆಗಳು ಪಾಸ್ ಪೋರ್ಟ್ ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article