ಮಂಗಳೂರು: ಡ್ರಿಂಕ್ಸ್ ಬಿಲ್ ಹಣ ಕೇಳಿದ್ದಕ್ಕೆ ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಕೊಲೆಯತ್ನ - ಆರೋಪಿ ಅರೆಸ್ಟ್

ಮಂಗಳೂರು: ಡ್ರಿಂಕ್ಸ್ ಬಿಲ್ ಹಣ ಕೇಳಿದ್ದಕ್ಕೆ ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಕೊಲೆಯತ್ನ - ಆರೋಪಿ ಅರೆಸ್ಟ್


ಮಂಗಳೂರು: ಡ್ರಿಂಕ್ಸ್ ಬಿಲ್ ಹಣ ಕೇಳಿದ್ದಕ್ಕೆ ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಕೊಲೆಗೆತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಆರೋಪಿ ಮೊಹಮ್ಮದ್ ಹನೀಫ್ ಅಲಿಯಾಸ್ ಚಾಕು(30) ಬಂಧಿತ ಆರೋಪಿ.

ಆಗಸ್ಟ್ 18ರಂದು ರಾತ್ರಿ 10-15ರ ವೇಳೆಗೆ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದ ಗೂಡಂಗಡಿ ಮುಂಭಾಗ ಈರಪ್ಪ ಕುರಿ ಎಂಬಾತ ಮೊಹಮ್ಮದ್ ಹನೀಫ್ ಡ್ರಿಂಕ್ಸ್ ಮಾಡಿರುವ ಬಿಲ್ ಮೊತ್ತ ಕೊಡುವಂತೆ ಕೇಳಿದ್ದಾನೆ. ಆಗ ಆರೋಪಿ ಮೊಹಮ್ಮದ್ ಹನೀಫ್ ಕೊಲೆ ಮಾಡುವ ಉದ್ದೇಶದಿಂದ ವಿರೇಶ್ ನ ಎಡಕೈಗೆ ಹಾಗೂ ಕುತ್ತಿಗೆಯ ಹಿಂಬದಿ ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಪೊಲೀಸ್‌ ಠಾಣೆಯ ಪಿಎಸ್‌ಐ ಜ್ಯೋತಿ ಎಂ.ಜಿ.ಯವರು ಸಿಬ್ಬಂದಿಯ ಸಹಾಯದಿಂದ ಮೊಹಮ್ಮದ್ ಹನೀಫ್ ನನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

Ads on article

Advertise in articles 1

advertising articles 2

Advertise under the article