ಮಂಗಳೂರು: ಅ.9ರಂದು ಬೃಹತ್ ಶೌರ್ಯ ಜಾಗರಣ ರಥ, ಬೃಹತ್ ಸಾರ್ವಜನಿಕ ಸಭೆ

ಮಂಗಳೂರು: ಅ.9ರಂದು ಬೃಹತ್ ಶೌರ್ಯ ಜಾಗರಣ ರಥ, ಬೃಹತ್ ಸಾರ್ವಜನಿಕ ಸಭೆ


ಮಂಗಳೂರು: ಸ್ವಾತಂತ್ರ್ಯ ಪೂರ್ವದ ಹೋರಾಟದ, ಸ್ವಾತಂತ್ರ್ಯದ ಹೋರಾಟ, ಬಳಿಕದ ರಾಮಜನ್ಮ ಭೂಮಿಯ ಹೋರಾಟದ ಶೌರ್ಯವನ್ನು ಯುವಜನತೆಗೆ ತಿಳಿಸಲು ಬಜರಂಗದಳದಿಂದ ಶೌರ್ಯ ಹಾಗರಣ ರಥಯಾತ್ರೆ ನಡೆಯಲಿದೆ. ಚಿತ್ರದುರ್ಗದಿಂದ ಹೊರಡುವ ಈ ರಥಯಾತ್ರೆ ಅಕ್ಟೋಬರ್ 9ರಂದು ಮಂಗಳೂರಿಗೆ ಆಗಮಿಸಲಿದೆ ಎಂದು ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದರು.

ಕದ್ರಿಯ ವಿಶ್ವಶ್ರೀಯಲ್ಲಿ ಮಾತನಾಡಿದ ಅವರು, ಪುತ್ತೂರಿಂದ ಆಗಮಿಸುವ ಈ ರಥಯಾತ್ರೆಯನ್ನು ಅಕ್ಟೋಬರ್ 9ರಂದು ಬೆಳಗ್ಗೆ 10ಗಂಟೆಗೆ ಅರ್ಕುಳದಲ್ಲಿ ಮಂಗಳೂರು ನಗರಕ್ಕೆ ಭವ್ಯವಾಗಿ ಸ್ವಾಗತಿಸಲಾಗುತ್ತದೆ. ಮಧ್ಯಾಹ್ನ 3ಗಂಟೆಗೆ ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ ಸರ್ಕಲ್) ಬಳಿಯಿಂದ ಭವ್ಯ ರಥಯಾತ್ರೆಯು ಕದ್ರಿ ಮೈದಾನದವರೆಗೆ ಶೋಭಾಯಾತ್ರೆಯ ಮೂಲಕ ಆಗಮಿಸಲಿದೆ. ಈ ಶೋಭಾಯಾತ್ರೆಯಲ್ಲಿ ದೇಶದ ಮಹಾಪುರುಷರ, ಶೌರ್ಯ ಪರಾಕ್ರಮಿಗಳ, ಬಲಿದಾನಗೈದ ವೀರರ ಸ್ತಬ್ಧಚಿತ್ರಗಳು ಸಾಥ್ ನೀಡಲಿದೆ. ಶೋಭಾಯಾತ್ರೆಯ ಬಳಿಕ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಸಭೆಯಲ್ಲಿ ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ನೀಡಲಿದ್ದಾರೆ. 25ಸಾವಿರ ಮಂದಿ ಈ ಸಭೆಯಲ್ಲಿ ಸೇರುವ ಗುರಿಯಿದೆ. ಜೊತೆಗೆ ಮಂಗಳೂರು ನಗರದಲ್ಲಿ ಈಗಾಗಲೇ 150ಕ್ಕೂ ಅಧಿಕ ಬಜರಂಗದಳದ ಘಟಕಗಳಿದೆ. ಅದನ್ನು 300ಕ್ಕೆ ಏರಿಸುವ ಗುರಿಯಿದೆ ಎಂದು ಶಿವಾನಂದ ಮೆಂಡನ್ ಹೇಳಿದರು.

ಬೈಟ್: ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್

Ads on article

Advertise in articles 1

advertising articles 2

Advertise under the article