ಮಂಗಳೂರು: ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ ಮುರು ಮೀನ್ - ವೀಡಿಯೋ ವೈರಲ್

ಮಂಗಳೂರು: ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ ಮುರು ಮೀನ್ - ವೀಡಿಯೋ ವೈರಲ್



ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದೆ. ಇದರ ವೀಡಿಯೋ ಇದೀಗ ವೈರಲ್ ಆಗಿದೆ.

ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆಂದು ಹೊರಟ ಬೋಟ್ ನವರ ಬಲೆಗೆ ಈ ಮೀನು ದೊರಕಿದೆ. ಸುಮಾರು 300 ಕೆಜಿಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡು ಬಂದಿದೆ. ಸಾಮಾನ್ಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ‌. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಕೆಜಿಗೆ 200 ರೂ. ಬೆಲೆಗೆ ಈ ಮೀನು ಮಾರಾಟವಾಗುತ್ತದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article