ಮಂಗಳೂರು: ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟ ಮುಡಿಗೇರಿಸಿದ ಕುಡ್ಲದ ಕುವರಿ

ಮಂಗಳೂರು: ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟ ಮುಡಿಗೇರಿಸಿದ ಕುಡ್ಲದ ಕುವರಿ


ಮಂಗಳೂರು: ಥಾಯ್ಲ್ಯಾಂಡ್ ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟವನ್ನು ಕುಡ್ಲದ ಕುವರಿ ಯಶಸ್ವಿನಿ‌ ದೇವಾಡಿಗ ಮುಡಿಗೇರಿಸಿದ್ದಾರೆ.
15ಕ್ಕೂ ಅಧಿಕ ದೇಶಗಳಿಂದ 50ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧಾರ್ಥಿಗಳಾಗಿದ್ದರು. ನಾಲ್ಕು ದಿನಗಳಲ್ಲಿ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ದೇಶದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪ್ರದರ್ಶಿಸಿದ್ದರು. ಜೊತೆಗೆ ಸಾಂಪ್ರದಾಯಿಕ ಆಹಾರವನ್ನು ಪ್ರದರ್ಶಿಸಬೇಕಿತ್ತು. ಜೊತೆಗೆ ತಮ್ಮಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಬೇಕಿತ್ತು. ನಾಲ್ಕನೇ ದಿನ ಫೈನಲ್ ಹಂತದ ಸ್ಪರ್ಧೆ ನಡೆದಿತ್ತು.
ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಮಂಗಳೂರಿನ ಕುಳಾಯಿ ನಿವಾಸಿಯಾಗಿರುವ ಯಶಸ್ವಿನಿ ದೇವಾಡಿಗ ದೇವದಾಸ ದೇವಾಡಿಗ - ಮೀನಾಕ್ಷಿ ದೇವಾಡಿಗ ದಂಪತಿಯ ಪುತ್ರಿ. ಇವರು ಸುರತ್ಕಲ್ ಗೋವಿಂದದಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

Ads on article

Advertise in articles 1

advertising articles 2

Advertise under the article