ನಂತೂರಿನಲ್ಲಿ ಹಾರೆ ಗುದ್ದಲಿ ಹಿಡಿದು ಗುಂಡಿ ಮುಚ್ಚಿದ ಪೊಲೀಸ್ ಅಧಿಕಾರಿಗಳು
Friday, September 22, 2023
ಮಂಗಳೂರು: ನಂತೂರು ಜಂಕ್ಷನ್ ರಸ್ತೆಯಲ್ಲಿನ ಹೊಂಡ ಗುಂಡಿಗಳನ್ನು ಪೊಲೀಸ್ ಅಧಿಕಾರಿಗಳೆ ಹಾರೆ ಗುದ್ದಲಿ ಹಿಡಿದು ಗುಂಡಿ ಮುಚ್ಚಿದ ವಿಡಿಯೋ ವೈರಲ್ ಆಗಿದೆ.
ನಂತೂರು ಜಂಕ್ಷನ್ ನಲ್ಲಿ ಈ ಹಿಂದೆ ಗುಂಡಿಗಳಿಂದಲೇ ಆ್ಯಕ್ಸಿಡೆಂಟ್ ಆಗಿ ಹಲವರು ಜೀವ ಕಳೆದುಕೊಂಡಿದ್ದರು. ಈ ಸಂಭಾವ್ಯ ಅಪಾಯಗಳನ್ನು ಹಾಗೂ ಸಂಚಾರ ಅಡಚಣೆಯನ್ನು ತಪ್ಪಿಸಲು ನಂತೂರಿನ ರಸ್ತೆ ಗುಂಡಿಗಳನ್ನು ಮಂಗಳೂರು ನಗರ ಪೊಲೀಸ್ ಅಧಿಕಾರಿಗಳೇ ಸ್ವತಃ ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ.
ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್ ಸ್ಪೆಕ್ಟರ್ ಈಶ್ವರ ಸ್ವಾಮಿ, ಎಎಸ್‌ಐ ವಿಶ್ವನಾಥ ರೈ ಹಾರೆ, ಗುದ್ದಲಿ ಹಿಡಿದು ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ. ಇವರು ಹಾರೆ ಗುದ್ದಲಿ ಹಿಡಿದು ಗುಂಡಿ ಮುಚ್ಚಿದ ವಿಡಿಯೋ ವೈರಲ್ ಆಗಿದೆ.