ಮಂಗಳೂರು: ಶಿಸ್ತುಬದ್ಧತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ - ಭಕ್ತರ ಚಪ್ಪಲಿ ಇಡುವಲ್ಲೂ ಶಿಸ್ತುಪಾಲನೆ

ಮಂಗಳೂರು: ಶಿಸ್ತುಬದ್ಧತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ - ಭಕ್ತರ ಚಪ್ಪಲಿ ಇಡುವಲ್ಲೂ ಶಿಸ್ತುಪಾಲನೆ


ಮಂಗಳೂರು: ಹೀಗೆ ಸಾಲಾಗಿ ಜೋಡಿಸಿಟ್ಟಿರುವ ಚಪ್ಪಲಿಯ ದೃಶ್ಯವನ್ನು ನೋಡಿ. ಇದು ಮಾರಾಟಕ್ಕಿಟ್ಟಿರುವ ಚಪ್ಪಲಿ ಎಂದು ನೀವು ಅನಿಸಿದರೆ ನಿಮ್ಮ‌ ಊಹೆ ತಪ್ಪಾಗುತ್ತದೆ. ನಿಜವಾಗಿ ಇದು ಮಂಗಳೂರಿನ ಸಂಘನಿಕೇತನದ ಗಣೇಶೋತ್ಸವಕ್ಕೆ ಆಗಮಿಸಿರುವ ಭಕ್ತರ ಚಪ್ಪಲಿ.
ಹೌದು... ಹೀಗೆ ಶಿಸ್ತುಬದ್ಧವಾಗಿ ಜೋಡಿಸಿಟ್ಟಿರುವ ಚಪ್ಪಲಿಯ ದೃಶ್ಯ ಕಂಡು ಬಂದಿದ್ದು, ಸಂಘನಿಕೇತನದ ಗಣೇಶೋತ್ಸವದಲ್ಲಿ. ನಾವು ದೇವಸ್ಥಾನಕ್ಕೋ, ಉತ್ಸವಕ್ಕೋ, ಸಮಾರಂಭಕ್ಕೋ ಹೋದರೆ ಹೊರಗಡೆ ಚಲ್ಲಾಪಿಲ್ಲಿಯಾಗಿರುವ ಚಪ್ಪಲಿಗಳ ರಾಶಿಯೇ ಕಂಡು ಬರುತ್ತದೆ‌. ಕೊನೆಗೆ ಹೊರಬರುವಾಗ ಆ ರಾಶಿಯ ನಡುವೆ ನಮ್ಮ ಚಪ್ಪಲಿಗಳ ಹುಡುಕಾಟವೇ ತ್ರಾಸದಾಯಕ.  ಒಳಗಡೆ ಧಾರ್ಮಿಕ, ಶ್ರದ್ಧಾ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಆದರೆ ಒಳಹೊಕ್ಕಾಗ ರಾಶಿರಾಶಿ ಚಲ್ಲಾಪಿಲ್ಲಿಯಾಗಿರುವ ಚಪ್ಪಲಿಗಳ ದಿಗ್ದರ್ಶನ ಎಂಥವರಿಗೂ ಇರಿಸುಮುರಿಸು ತರಿಸುತ್ತದೆ‌.

ಬೈಟ್: ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕಾಧ್ಯಕ್ಷ - ಫ್ರ್ಯಾಂಕ್ಲಿನ್ ಮೊಂತೆರೋ

ಆದರೆ ಸಂಘನಿಕೇತನವು ಆರ್ ಎಸ್ ಎಸ್ ನ ಜಿಲ್ಲಾ ಕಾರ್ಯಾಲಯ. ಇಲ್ಲಿ ಎಲ್ಲವೂ ಶಿಸ್ತುಬದ್ಧ. ಹಾಗಾಗಿ ಸಂಘನಿಕೇತನ ಒಳಪ್ರವೇಶಕ್ಕೆ ಮೊದಲೇ ಚಪ್ಪಲಿ ಇಡಲು ಹಳದಿ ಪಟ್ಟಿಯನ್ನು ಹಾಕಲಾಗಿದೆ. ಆ ಹಳದಿ ಪಟ್ಟಿಯ ಉದ್ದಕ್ಕೆ ಚಪ್ಪಲಿಯನ್ನು ಜೋಡಿಸಿ ಇಡಲಾಗುತ್ತದೆ‌. ಚಪ್ಪಲಿಗಳನ್ನು ಕ್ರಮಬದ್ಧವಾಗಿ ಜೋಡಿಸಿಡುವುದಕ್ಕೆಂದು ಇಬ್ಬರು - ಮೂವರು ಯುವ ಕಾರ್ಯಕರ್ತರನ್ನು ನೇಮಿಸಲಾಗಿದೆ. ಅವರು ಬರುವ ಭಕ್ತರಿಗೆ ಚಪ್ಪಲಿ ಜೋಡಿಸಿಡಲು ಸೂಚನೆ ನೀಡುತ್ತಿರುತ್ತಾರೆ. ಭಕ್ತರೂ, ಚಪ್ಪಲಿಗಳ ಸಾಲು ನೋಡಿ ಸ್ವಯಂ ಜಾಗೃತರಾಗಿ ಚಪ್ಪಲಿಯನ್ನು ಎಲ್ಲೆಲ್ಲಿ ಇಡದೆ, ಸಾಲಾಗಿ ಜೋಡಿಸುತ್ತಿರುವುದು ಕಂಡು ಬರುತ್ತಿದೆ. ಒಟ್ಟಿನಲ್ಲಿ ಸಂಘನಿಕೇತನದ ಗಣೇಶೋತ್ಸವ ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ ಶಿಸ್ತುಬದ್ಧತೆಯಿಂದಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Ads on article

Advertise in articles 1

advertising articles 2

Advertise under the article