ಮಂಗಳೂರು: ಯುದ್ಧಪೀಡಿತ ಇಸ್ರೇಲ್ ನಲ್ಲಿ 12ಸಾವಿರಕ್ಕೂ ಅಧಿಕ ಕರಾವಳಿಗರು - ಎಲ್ಲರೂ ಸುರಕ್ಷಿತ
Monday, October 9, 2023
ಮಂಗಳೂರು: ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರು ದಾಳಿ ನಡೆಸಿರುವ ಇಸ್ರೇಲ್ ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರಿದ್ದಾರೆ. ಗಡಿನಾಡು ಕಾಸರಗೋಡಿನ ಗೋವಾದ ಗಡಿಭಾಗ ಕಾರವಾರದವರೆಗೆ ಇಸ್ರೇಲ್ ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲರೂ ಯುದ್ಧಪೀಡಿತ ಪ್ರದೇಶದ ಸುತ್ತಮುತ್ತಲೇ ಇದ್ದರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವರಲ್ಲಿ ಶೇಕಡಾ 50ರಷ್ಟು ಮಹಿಳೆಯರೂ ಇದ್ದಾರೆ. ಇವರಲ್ಲಿ ಅಧಿಕ ಮಂದಿ ಕ್ರಿಶ್ಚಿಯನ್ ಸಮುದಾಯದವರಾಗಿದ್ದು, ಹಿಂದೂಗಳೂ ಇದ್ದಾರೆ. 8ಸಾವಿರಕ್ಕೂಅಧಿಕ ಮಂದಿ ದಕ್ಷಿಣ ಕನ್ನಡದವರೂ ಇದ್ದಾರೆ ಎಂದು ತಿಳಿದು ಬಂದಿದೆ. ಇವರೆಲ್ಲರೂ ಭಾರತದ ಹೋಮ್ ನರ್ಸ್ ಮಾದರಿಯ ಕೇರ್ ಗೀವರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ 16 ವರ್ಷಗಳಿಂದ ಇಸ್ರೇಲ್ ನ ಟಲ್ ಅವೀವ್‌ನಲ್ಲಿ ಮಂಗಳೂರಿನ ಹೊರವಲಯದ ದಾಮಸ್ ಕಟ್ಟೆಯ ಪ್ರವೀಣ್ ಪಿಂಟೋ ಕುಟುಂಬ ನೆಲೆಸಿದೆ. ಅದೇ ರೀತಿ ಮಂಗಳೂರು ಮೂಲದ ಲೆನಾರ್ಡ್ ಫರ್ನಾಂಡೀಸ್ ಕಳೆದ 14ವರ್ಷಗಳಿಂದ ಇಸ್ರೇಲ್ ವಾಸಿಯಾಗಿದ್ದಾರೆ. ಆದ್ದರಿಂದ ಮಂಗಳೂರಿನಲ್ಲಿ ಪ್ರವೀಣ್ ಪಿಂಟೋ ಹಾಗೂ ಲೆನಾರ್ಡ್ ಫರ್ನಾಂಡೀಸ್ ಕುಟುಂಬ ಆತಂಕದಲ್ಲಿದೆ. ದೂರವಾಣಿ ಮೂಲಕ ಅವರುಗಳ ಸುರಕ್ಷತೆಯನ್ನು ಕುಟುಂಬ ಖಾತರಿ ಪಡೆಸುತ್ತಿದೆ. ಬಂಕರ್ ಗಳಲ್ಲಿ ಇಬ್ಬರೂ ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ. ಮನೆಯಿಂದ ಹೊರ ಬಾರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆಯನ್ನು ನೀಡಿದೆ ಎಂದು ತಿಳಿದು ಬಂದಿದೆ.
Byte: ಪ್ರವೀಣ್ ಪಿಂಟೋ ಪತ್ನಿ ನೀತಾ ಸಲ್ಡಾನ