ಮಂಗಳೂರು: ಇಂದಿನಿಂದ ರಾಷ್ಟ್ರೀಯ ಈಜು ಸ್ಪರ್ಧೆ
Saturday, November 25, 2023
ಮಂಗಳೂರು: ನಗರದ ಎಮ್ಮೆಕೆರೆ ಈಜು
ಕೊಳದಲ್ಲಿ ನ.25ರಿಂದ 27ರವರೆಗೆ ರಾಷ್ಟ್ರೀಯ
ಮಟ್ಟದ ಈಜು ಸ್ಪರ್ಧೆ
ಆಯೋಜಿಸಲಾಗಿದೆ.
ಈಜುಸ್ಪರ್ಧೆಯ ಆಯೋಜಕ ತೇಜೋಮಯ, ಈ ಸ್ಪರ್ಧೆಯಲ್ಲಿ 29 ರಾಜ್ಯಗಳ 850
ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಮೂರು
ದಿನಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ
- 12 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇಲ್ಲಿ
ಆಯ್ಕೆಯಾದವರು ಏಷ್ಯಾಡ್ ಸ್ಪರ್ಧೆಗೆ
ಭಾಗವಹಿಸಲು ಅರ್ಹರಾಗುತ್ತಾರೆ ಎಂದರು.
ಈ ಬಾರಿಯ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ
ತೆಲಂಗಾಣದ ಓಂ ಸೇತ್ 89ರ ಹರೆಯದ
ವಿಭಾಗದಲ್ಲಿ ಭಾಗವಹಿಸಿ ವಿಶೇಷವಾಗಿ ಗಮನ
ಸೆಳೆಯಲಿದ್ದಾರೆ.