ಮಂಗಳೂರು:ಕಾಳಿಂಗ ಸರ್ಪ ,ಹೆಬ್ಬಾವು ನಡುವೆ ಕಾಳಗ,ಕಾಳಿಂಗದ ಹಿಡಿತದಲ್ಲಿದ್ದ ಹೆಬ್ಬಾವನ್ನು ರಕ್ಷಿಸಿದ ಉರಗ ಪ್ರೇಮಿ king cobra python fight
Tuesday, December 12, 2023
ಬೆಳ್ತಂಗಡಿ, ಡಿ.12: ಹೆಬ್ಬಾವೊಂದನ್ನು ಭಾರೀ ಗಾತ್ರದ ಕಾಳಿಂಗ ಸರ್ಪ ಬೇಟೆಯಾಡಿದ್ದು ಅದನ್ನು ತಿನ್ನುವ ಪ್ರಯತ್ನದಲ್ಲಿದ್ದಾಗ ಉರಗ ಪ್ರಿಯರು ಸೇರಿ ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ನಡೆದಿದೆ.
ಕಲ್ಲಾಜೆ ಪ್ರಾಥಮಿಕ ಶಾಲೆ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಬಳಿಯಲ್ಲಿ 8 ಅಡಿ ಉದ್ದದ ಹೆಬ್ಬಾವನ್ನು ಸುಮಾರು 16 ಅಡಿ ಉದ್ದವಿದ್ದ ಬೃಹತ್ ಕಾಳಿಂಗ ಸರ್ಪ ಬೇಟೆಯಾಡಿತ್ತು. ಇದನ್ನು ನೋಡಿದ ಬಾಲಕೃಷ್ಣ ಗೌಡ, ಕೂಡಲೇ ಲಾಯದ ಉರಗ ರಕ್ಷಕ ಸ್ನೇಕ್ ಅಶೋಕ್ ಅವರನ್ನು ಕರೆಸಿದ್ದಾರೆ.
ಅಶೋಕ್ ಅವರು ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.