ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವುದು ಕಾಂಗ್ರೆಸ್ ಹಳೆಯ ಚಾಳಿ : ಡಾ. ಧನಂಜಯ ಸರ್ಜಿ

ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವುದು ಕಾಂಗ್ರೆಸ್ ಹಳೆಯ ಚಾಳಿ : ಡಾ. ಧನಂಜಯ ಸರ್ಜಿಮಂಗಳೂರು: ಬಿಜೆಪಿಯ ಸಕ್ರಿಯ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿ, ಉಳಿದ ಕಾರ್ಯಕರ್ತರನ್ನು ಬೆದರಿಸಿ ಹಣಿಯಲು ಪ್ರಯತ್ನಿಸುವುದು ಕಾಂಗ್ರೆಸ್ಸಿನ ಹಳೆ ಚಾಳಿ ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲೆ ಸುಲಿಗೆ ಮಾಡಿರುವವರನ್ನು ಬಂಧಿಸಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ, ಸುಳ್ಳು ಕೇಸಿನ ಆಧಾರದ ಮೇಲೆ ಶನಿವಾರ ಮಧ್ಯರಾತ್ರಿ ಉಗ್ರಗಾಮಿಯನ್ನು ನಡೆಸಿಕೊಳ್ಳುವಂತೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದೆ. ಆಡಳಿತ ಯಂತ್ರವನ್ನು ದುರುಪಯೋಗಿಸಿ, ಪೊಲೀಸ್ ದೌರ್ಜನ್ಯದಿಂದ ತಮ್ಮ ಕೀಳುಮಟ್ಟದ ತಂತ್ರಗಳಿಂದ  ನಮ್ಮ ಕಾರ್ಯಕರ್ತರನ್ನು ಬೆದರಿಸಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರೊಂದಿಗೆ ಸಂಘಟನೆ ನಿಲ್ಲಲಿದೆ. ಏನೇ ಬರಲಿ ಕಾರ್ಯಕರ್ತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಡಾ. ಧನಂಜಯ ಸರ್ಜಿ ಹೇಳಿದರು.

Ads on article

Advertise in articles 1

advertising articles 2

Advertise under the article