ಡಾ.ಧನಂಜಯ ಸರ್ಜಿಯವರನ್ನು ವಿಧಾನ ಪರಿಷತ್ ಗೆ ಕಳಿಸಿಕೊಡಿ - ಡಾ. ನಾಗರಾಜ್ ಮನವಿ

ಡಾ.ಧನಂಜಯ ಸರ್ಜಿಯವರನ್ನು ವಿಧಾನ ಪರಿಷತ್ ಗೆ ಕಳಿಸಿಕೊಡಿ - ಡಾ. ನಾಗರಾಜ್ ಮನವಿ

ಶಿವಮೊಗ್ಗ : ವಿದ್ಯಾವಂತರು ರಾಜಕೀಯಕ್ಕೆ ಬರಬೇಕೆಂದು ಪ್ರಧಾನಿ ಮೋದಿಯವರು ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ. ಅದರಂತೆಯೇ ಡಾ. ಧನಂಜಯ ಸರ್ಜಿ ಇಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸರ್ಜಿಯವರಿಗೆ ಮತ ಹಾಕುವುದರ ಮೂಲಕ ಈ ಬಾರಿ ಅವರನ್ನು ವಿಧಾನ ಪರಿಷತ್ ಗೆ ಕಳುಹಿಸಬೇಕು ಎಂದು ಪಿಎಸ್ ಕಾಲೇಜಿನ ಆಡಳಿತ ಸಂಯೋಜಕರಾದ ಡಾ. ನಾಗರಾಜ್ ಮನವಿ ಮಾಡಿದರು. 
ನಗರದ ಪಿಇಎಸ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ‌ಪರ ಮತಯಾಚಿಸಲಾಯಿತು.

ರಾಜ್ಯ ಪ್ರಕೋಷ್ಠಗಳ ಸಂಯೋಜಕ, ಎಸ್. ದತ್ತಾತ್ರಿ ಮಾತನಾಡಿ, ಕಳೆದ 30ವರ್ಷಗಳಿಂದ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ.  ಈ ಬಾರಿ ಡಾ.ಧನಂಜಯ ಸರ್ಜಿ ಅವರಿಗೆ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ನಾವೆಲ್ಲರೂ ಸರ್ಜಿ ಅವರ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದರು. 
ಈ ಚುನಾವಣೆಯಲ್ಲಿ ಇವಿಎಂ ಇರುವುದಿಲ್ಲ, ಬ್ಯಾಲೆಟ್ ಪೇಪರ್ ಇರುತ್ತದೆ, ತಾವೆಲ್ಲರೂ ಡಾ.ಧನಂಜಯ ಸರ್ಜಿ  ಹೆಸರಿನ ಮುಂದೆ ಒಂದು ಗೆರೆ ಎಳೆಯುವ ಮೂಲಕ ಮೊದಲ ಪ್ರಾಶಸ್ತ್ಯದ ಮತವನ್ನು ಹಾಕಬೇಕು. ಮಧ್ಯ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಾ.ಸರ್ಜಿ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಹೋದರೆ ಪದವೀಧರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಫಲರಾಗುತ್ತಾರೆ ಎಂದು ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ರೈತರು, ಯೋಧರಂತೆ ಪದವೀಧರರು ದೇಶದ ಬೆನ್ನೆಲುಬು. ದೇಶದ ಭವ್ಯ ಭವಿಷ್ಯದ ನಿರ್ಮಾಣದಲ್ಲಿ ಪದವೀಧರರ ಪಾತ್ರ ಬಹಳ ಮುಖ್ಯ. ಪದವೀಧರರ ಸಮಸ್ಯೆಗಳನ್ನು ಅತೀ ಹತ್ತಿರದಿಂದ ಬಲ್ಲವನಾಗಿದ್ದು, ಪದವೀಧರ  ಸಮಸ್ಯೆಗಳಿಗೆ  ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಎಚ್. ಮಾಲತೇಶ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಪದವೀಧರರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article