ಬೆಳ್ತಂಗಡಿ: ಕಾಡುಪ್ರಾಣಿ ಬೇಟೆಗಾರರ ತಂಡವನ್ನು ಬಂಧಿಸಿದ ಅರಣ್ಯಾಧಿಕಾರಿಗಳು
Thursday, May 23, 2024
ಬೆಳ್ತಂಗಡಿ: ಇಲ್ಲಿನ ಶಿಬಾಜೆ ಗ್ರಾಮದ ಪೆರ್ಲ- ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆಗೆತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಶಿಬಾಜೆ ಗ್ರಾಮದ ಕುರುಂಬು ನಿವಾಸಿ ಹರೀಶ್, ಸಕಲೇಶಪುರದ ಕೌಡಳ್ಳಿ ನಿವಾಸಿ ಶಿವಕುಮಾರ್, ಶಿಬಾಜೆಯ ಪತ್ತಿಮಾರ್ ನಿವಾಸಿ ಪದ್ಮನಾಭ ಬಂಧಿತ ಆರೋಪಿಗಳು. ಆರೋಪಿಗಳಿಂದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಮಾರುತಿ ಓಮ್ನಿ ಕಾರು ವಶಕ್ಕೆ ಪಡೆಯಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟರ್ ನಿಂಗಪ್ಪ ಅವರಿ ಮತ್ತು ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.