ದೆಹಲಿ :ಬಾಲಕನ ಹೊಟ್ಟೆಯಲ್ಲಿತ್ತು ಬ್ಯಾಟರಿ, ಬ್ಲೇಡ್,ಮೊಳೆ, ಉಗುರು;ಹೊಟ್ಟೆಯಿಂದ 56 ವಸ್ತುಗಳನ್ನು ಹೊರಕ್ಕೆ ತೆಗೆದ ವೈದ್ಯರು;ಸಿಕ್ಕಿದ್ದನೆಲ್ಲಾ ತಿಂದು ಶಸ್ತ್ರಚಿಕಿತ್ಸೆ ನಂತರ ಸಾವನ್ನಪ್ಪಿದ 9ನೇ ತರಗತಿ ಬಾಲಕ..boy bad habbit operation death
Monday, November 4, 2024
ದೆಹಲಿ :ಪುಟಾಣಿ ಮಕ್ಕಳಿಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕುವ ಅಭ್ಯಾಸವಿರುತ್ತವೆ. ಗೊತ್ತಿಲ್ಲದೆ ಅವನ್ನು ನುಂಗಿ ಬಿಡುತ್ತವೆ. ಹೀಗಾಗಿ ಪೋಷಕರು ಅವರ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಆದರೆ ಎಷ್ಟೇ ಎಚ್ಚರಿಕೆಯಿಂದ ಇದ್ದರು ಕೆಲವೊಮ್ಮೆ ಕಣ್ತಪ್ಪಿಸಿ ನುಂಗಿ ಅನಾಹುತಕ್ಕೆ ಕಾರಣವಾಗುತ್ತದೆ. ಆದರೆ ಇಲ್ಲೊಬ್ಬ ಬಾಲಕನಿಗೆ ಅಂತಹದ್ದೇ ಬುದ್ಧಿ. ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ತಿನ್ನುವ ಅಭ್ಯಾಸ. ಹೀಗೆ ತಿನ್ನುತ್ತಾ ಸುಮಾರು 56 ವಸ್ತುಗಳು ಆತನ ಹೊಟ್ಟೆ ಸೇರಿವೆ. ಆದರೆ ಅಪಾಯದಲ್ಲಿದ್ದ ಬಾಲಕನ ಜೀವ ಉಳಿಸುವ ವೇಳೆ ಆತ ಸಾವನ್ನಪ್ಪಿದ್ದಾನೆ.
ಪುಟಾಣಿ ಮಕ್ಕಳಾದರೆ ಹೇಳಬಹುದು. ಆದರೆ ಬಾಲಕ ಆದಿತ್ಯನಿಗೆ 15 ವರ್ಷ. ಅಂದರೆ 9ನೇ ತರಗತಿಯಲ್ಲಿ ಓದುತ್ತಿದ್ದನು. ಸರಿಯಾಗಿ ಆಹಾರ ತಿನ್ನುವ ಕಾಲದಲ್ಲಿ ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ತಿನ್ನುತ್ತಿದ್ದನು. ಹೀಗೆ ತಿನ್ನುತ್ತಾ ಸುಮಾರು 56 ವಸ್ತುಗಳನ್ನು ತಿಂದಿದ್ದಾನೆ. ಹೀಗೆ ಹೊಟ್ಟೆ ಸೇರಿದ ಬಳಿಕ ಬಾಲಕನಿಗೆ ಹೊಟ್ಟೆ ನೋವು, ಉಸಿರಾಟದ ಸಮಸ್ಯೆ ಕಾಡಲಾರಂಭಿಸಿದೆ. ಬಳಿಕ ಜೀವಕ್ಕೆ ಅಪಾಯ ಎದುರಾಗಿದೆ.
ಇದು ದೆಹಲಿಯಲ್ಲಿ ನಡೆದ ಘಟನೆ. ಬ್ಯಾಟರಿ, ಬ್ಲೇಡ್, ಮೊಳೆ, ಉಗುರು ತಿಂದ ಬಾಲಕ ಸಫ್ದರ್ಜಂಗ್ ಆಸ್ಪತ್ರೆ ಸೇರಿದ್ದಾನೆ. ಕೊನೆಗೆ ವೈದ್ಯರು ಆತನ ಜೀವ ಉಳಿಸಲು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಕೊನೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯೂ ಆಗಿದೆ. ಆದರೆ ಮಾರನೇ ದಿನ ಬಾಲಕ ಸಾವನ್ನಪ್ಪಿದ್ದಾನೆ.