ಪರಪುರುಷನೊಂದಿಗೆ ಹೋಟೆಲ್ ರೂಮಿನಲ್ಲಿ ಪತಿಗೆ ಸಿಕ್ಕಿಬಿದ್ದ ಪತ್ನಿ: ವಿಡಿಯೋ ವೈರಲ್

ಪರಪುರುಷನೊಂದಿಗೆ ಹೋಟೆಲ್ ರೂಮಿನಲ್ಲಿ ಪತಿಗೆ ಸಿಕ್ಕಿಬಿದ್ದ ಪತ್ನಿ: ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧದ ಘಟನೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಗೃಹಸ್ಥ ಜೀವನದಲ್ಲಿರುವ ಒಬ್ಬರು, ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಂಡು, ಇದರಿಂದ ಉಂಟಾಗುವ ಕಲಹಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಈಗ ಅಂತಹದ್ದೇ ಮತ್ತೊಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲೊಬ್ಬ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಹೋಟೆಲ್ ಕೋಣೆಯಲ್ಲಿ ತನ್ನ ಪತಿಗೆ ಸಿಕ್ಕಿಬಿದ್ದಿದ್ದು. ಆ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು “Venomls" ಎಂಬ ಎಕ್ಸ್ ಖಾತೆಯಲ್ಲಿ ಹಂಚಲಾಗಿದ್ದು. “ಇತ್ತೀಚಿನ ದಿನಗಳಲ್ಲಿ ಮದುವೆ ಒಂದು ಭಯಾನಕ ವಿಷಯವಾಗಿದೆ” ಎಂಬ ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋದಲ್ಲಿ, ಪತಿಯು ಹೋಟೆಲ್ ಕೋಣೆಗೆ ಬಂದು ಕೋಪದಿಂದ ತನ್ನ ಹೆಂಡತಿಯನ್ನು ಪ್ರಶ್ನಿಸುತ್ತಿರುವ ದೃಶ್ಯವನ್ನು ನೋಡಬಹುದು. “ಇಲ್ಲಿ ಏನು ಮಾಡುತ್ತಿದ್ದೀಯಾ? ಯಾರೆಂದಿಗೆ ಬಂದಿದ್ದೀಯಾ?” ಎಂದು ಆಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಅಷ್ಟೇ ಅಲ್ಲದೆ ಅಲ್ಲಿ ಗಂಡಸಿನ ಶೂ ಇರುವುದನ್ನು ಕಂಡು ಶಾಕ್ ಆದ ಗಂಡ, ಈಕೆ ಪರಪುರುಷನೊಂದಿಗೆಯೇ ಬಂದಿದ್ದಾಳೆ ಎಂದು ಗೊತ್ತಾಗಿ ಆತನಿಗಾಗಿ ಇಡೀ ರೂಮ್ ಹುಡುಕಾಟ ನಡೆಸಿದ್ದಾನೆ.

ನ. 2ರಂದು ಹಂಚಲಾದ ಈ ವಿಡಿಯೋ ಈಗಾಗಲೇ 61 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದನ್ನು ನೋಡಿ ಹಲವರು “ಇಂತಹ ಘಟನೆಗಳಿಂದ ಯುವಕರು ಮದುವೆಯಾಗಲು ಹೆದರುತ್ತಾರೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article