ಹೊಸದಿಲ್ಲಿ : ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತ; 6 ಮಂದಿ ಸಾವು:ರಾತ್ರಿ ಪಾರ್ಟಿ ಮುಗಿಸಿ ಬರುವಾಗ ನಡೆದ ಘಟನೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ದೇಹಗಳು.
Friday, November 15, 2024
ಹೊಸದಿಲ್ಲಿ: ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನಪ್ಪಿದ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ
ಮೃತರನ್ನು ಡೆಹ್ರಾಡೂನ್‌ನ ನಿವಾಸಿಗಳಾದ ಗುನೀತ್ ಸಿಂಗ್, ಕಾಮಾಕ್ಷಿ ಸಿಂಘಾಲ್, ನವ್ಯಾ ಗೋಯಲ್, ರಿಷಭ್ ಜೈನ್ ಮತ್ತು ಅತುಲ್ ಅಗರವಾಲ್ ಮತ್ತು ಹಿಮಾಚಲ ಪ್ರದೇಶದ ಚಂಬಾದಿಂದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸಿದ್ಧೇಶ್ ಅಗರವಾಲ್ ಸ್ಥಿತಿ ಗಂಭೀರವಾಗಿದೆ.
ಸಿದ್ಧೇಶ್ ಆಯೋಜಿಸಿದ್ದ ಪಾರ್ಟಿ ಮುಗಿಸಿ 6 ಮಂದಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರನ್ನು ಅತೀವೇಗದಿಂದ ಚಲಾಯಿಸಿದ ಕಾರಣ ಟ್ರಕ್ ನ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಕಾರಿ ವೇಗ ಎಷ್ಟಿತ್ತು ಎಂದರೆ ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರ ಮೃತ ದೇಹಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಪೊಲೀಸ್ ಮಾಹಿತಿಗಳ ಪ್ರಕಾರಣ ವೇಗವಾಗಿ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ.