ಬೆಂಗಳೂರು:ಬಿಗ್ ಬಾಸ್ ನಲ್ಲಿ  ಬಾರಿ ಸುದ್ದಿಯಲ್ಲಿರುವ ಚೈತ್ರಾ ಕುಂದಾಪುರ; ಉಸಿರುಗಟ್ಟುವ ವಾತಾವರಣವಿದೆ ಮನೆಗೆ ಹೊಗುವ ನಿರ್ಧಾರ ಮಾಡಿರುವೆ ಎಂದ ಚೈತ್ರಾ ಕುಂದಾಪುರ.

ಬೆಂಗಳೂರು:ಬಿಗ್ ಬಾಸ್ ನಲ್ಲಿ ಬಾರಿ ಸುದ್ದಿಯಲ್ಲಿರುವ ಚೈತ್ರಾ ಕುಂದಾಪುರ; ಉಸಿರುಗಟ್ಟುವ ವಾತಾವರಣವಿದೆ ಮನೆಗೆ ಹೊಗುವ ನಿರ್ಧಾರ ಮಾಡಿರುವೆ ಎಂದ ಚೈತ್ರಾ ಕುಂದಾಪುರ.

ಬೆಂಗಳೂರು : ಬಿಗ್ ಬಾಸ್ ನಲ್ಲಿ ಈ ವಾರ ಚೈತ್ರಾ ಕುಂದಾಪುರ ಸಖತ್ ಸುದ್ದಿಯಲ್ಲಿದ್ದಾರೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಿಗ್ ಬಾಸ್ ನಲ್ಲಿ ಉಸಿರುಗಟ್ಟುವ ವಾತಾವರಣ ಇದೆ ನಾನು ಮನೆಗೆ ಹೋಗುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್ ಇಂದು ನಡೆಯಲಿದೆ. ವಾರದ ಪಂಚಾಯಿತಿ ನಡೆಸಿಕೊಡಲು ಸುದೀಪ್ ಬಂದಿದ್ದಾರೆ. ಈ ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ತುಸು ಹೆಚ್ಚೇ ಸಿಟ್ಟಾಗಿದ್ದಾರೆ. ಸುದೀಪ್ ಈ ಹಿಂದೆಯೂ ಬಿಗ್​ಬಾಸ್​ನಲ್ಲಿ ಸಿಟ್ಟಾಗಿದ್ದಾರೆ. ಆದರೆ ಮಹಿಳಾ ಕಂಟೆಸ್ಟ್​ಗಳ ಮೇಲೆ ಸಿಟ್ಟಾಗಿದ್ದು ಬಹಳ ಕಡಿಮೆ. ಆದರೆ ಇದೀಗ ಚೈತ್ರಾ ಮೇಲೆ ಸಿಟ್ಟಾಗಿದ್ದಾರೆ. ಅನಾರೋಗ್ಯದ ಕಾರಣ ಹೇಳಿ ಚಿಕಿತ್ಸೆಗಾಗಿ ಹೊರಗೆ ಹೋಗಿದ್ದ ಚೈತ್ರಾ, ಅಲ್ಲಿ ವೈದ್ಯರಿಂದ, ನರ್ಸ್​ಗಳಿಂದ ಬಿಗ್​ಬಾಸ್ ಬಗ್ಗೆ ಅಭಿಪ್ರಾಯಗಳನ್ನು ಕೇಳಿಕೊಂಡು ಬಂದಿದ್ದಾರೆ ಇದು ಸುದೀಪ್ ಸಿಟ್ಟಿಗೆ ಕಾರಣವಾಗಿದೆ.

ವಿಕ್ಕಿ ಅಣ್ಣ ನಿಮಗೆ ಎಲ್ಲೂ ಬೆಲೆ ಇಲ್ಲ ಬಿಡಿ. ಎಲ್ಲರೂ ನಾಟ್‌ ಓಕೆ ಎಂದು ಹೊರಗೆ ಕೇಳಿದ ಮಾತನ್ನು ಸ್ಪರ್ಧಿಗಳ ಬಳಿ ಹೇಳಿದ್ದಾರೆ. ಇದಕ್ಕೆ ಕಿಚ್ಚ ಪಂಚಾಯ್ತಿಯಲ್ಲಿ ಇದೆಲ್ಲ ಹೇಳುವ ಉದ್ದೇಶವೇನು. ಕಥೆ ಹೇಳಿದ್ರಾ ಡಾಕ್ಟರ್ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ನಾನೇ ಡಾಕ್ಟರ್‌ ಹತ್ರ ಸ್ವಲ್ಪ ಕೇಳಿದ್ದೆ. ಅಲ್ಲಿದ್ದ ನರ್ಸ್‌ ಹತ್ರ ಹೀಗೆಯೇ ಕೇಳಿದಾಗ ಪ್ರತಿಯೊಬ್ಬರು ಅಭಿಪ್ರಾಯಗಳಲ್ಲೂ ನಾನು ಯಾವುದು, ನನ್ನ ಅಭಿಪ್ರಾಯವನ್ನು ಮಿಕ್ಸ್‌ ಮಾಡಿ ಹೇಳಿಲ್ಲವೆಂದಿದ್ದಾರೆ.
ಇದಕ್ಕೆ ಕಿಚ್ಚ ಅವರು ಶ್…‌ಎಂದು ಸುಮ್ಮನೆ ಕೂರುವಂತೆ ಸನ್ನೆ ಮಾಡಿ ಹೇಳಿದ್ದಾರೆ. ಇದಕ್ಕೆ ಕಣ್ಣೀರಿಟ್ಟ ಚೈತ್ರಾ ಉಸಿರುಗಟ್ಟುವ ವಾತಾವರಣದಲ್ಲಿ ಇರುವುದ್ದಕ್ಕಿಂತ ಮನೆಗೆ ಹೋಗಬೇಕೆಂಥ ನಿರ್ಧಾರ ಮಾಡಿದ್ದೇನೆವೆಂದು ಕ್ಯಾಮರಾದ ಮುಂದೆ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article